ಕರ್ನಾಟಕ

karnataka

ETV Bharat / bharat

ಅವರ ಬಳಿ ಹಣವಿಲ್ಲ, ಇಂಧನ ಬೆಲೆಯಿಂದಲೇ ಬಿಜೆಪಿ ತನ್ನ ಸರ್ಕಾರ ನಡೆಸುತ್ತಿದೆ : ರಾಹುಲ್ ಗಾಂಧಿ - ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದಾಗಿ ಆರ್ಥಿಕತೆಯು ತೀವ್ರವಾಗಿ ಹಾನಿಗೊಳಗಾಯಿತು

ಆರ್ಥಿಕತೆಯು ಚಾಲನೆಯಲ್ಲಿಲ್ಲದ ಕಾರಣ ಸರ್ಕಾರಕ್ಕೆ ಈಗ ಹಣವಿಲ್ಲ. ಅವರಿಗೆ ತೆರಿಗೆ ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಹಣ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಅವರು ಈಗ ನಿಮ್ಮ ಜೇಬಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಹೆಸರಲ್ಲಿ ಬಲವಂತವಾಗಿ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರ ನಡೆಸುತ್ತಿದ್ದಾರೆ..

Rahul hits out at Centre over rising fuel prices
ಇಂಧನ ಬೆಲೆಯಿಂದಲೇ ಬಿಜೆಪಿ ತನ್ನ ಸರ್ಕಾರ ನಡೆಸುತ್ತಿದೆ

By

Published : Mar 22, 2021, 4:43 PM IST

Updated : Mar 22, 2021, 4:53 PM IST

ಕೊಚ್ಚಿ: ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು, ಸರ್ಕಾರವನ್ನು ನಡೆಸಲು ಜನರ ಜೇಬಿನಿಂದ ಬಲವಂತವಾಗಿ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವಾಯತ್ತ ಮಹಿಳಾ ಕಾಲೇಜಿನ ಸೇಂಟ್ ತೆರೇಸಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಗಾಂಧಿ, ಆರ್ಥಿಕತೆಯ ಕುಸಿತಕ್ಕೆ ಸರ್ಕಾರದ ದುರುಪಯೋಗಗಳೇ ಕಾರಣ ಎಂದು ದೂಷಿಸಿದರು.

ಈ ಸಮಸ್ಯೆ ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತದೆ. ಹಣವನ್ನು ಜನರ ಕೈಗೆ ಇಡುವುದೇ ಈ ಬಿಕ್ಕಟ್ಟಿನಿಂದ ಹೊರಬರಲು ಇರುವ ಏಕೈಕ ಮಾರ್ಗವಾಗಿದೆ. ಆದರೆ, ಸರ್ಕಾರವು ಇದನ್ನು ಆಲಿಸುತ್ತಿಲ್ಲ ಬದಲಿಗೆ ಅದು 'ಹೆಚ್ಚಿನ ವಸ್ತುಗಳನ್ನು ಉತ್ಪಾದಿಸಿ' ಎಂದು ಹೇಳುತ್ತಿದೆ ಎಂದರು.

ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದಾಗಿ ಆರ್ಥಿಕತೆಯು ತೀವ್ರವಾಗಿ ಹಾನಿಗೊಳಗಾಯಿತು. ಆ ವೇಳೆಯೇ ಅದು ಅಷ್ಟು ದುರ್ಬಲವಾಗಿತ್ತು. ಅದರ ನಂತರ ಬಂದ COVID-19 ಸಾಂಕ್ರಾಮಿಕದಿಂದ ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯಿತು ಎಂದು ಹೇಳಿದರು.

ಆರ್ಥಿಕತೆಯು ಚಾಲನೆಯಲ್ಲಿಲ್ಲದ ಕಾರಣ ಸರ್ಕಾರಕ್ಕೆ ಈಗ ಹಣವಿಲ್ಲ. ಅವರಿಗೆ ತೆರಿಗೆ ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಹಣ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಅವರು ಈಗ ನಿಮ್ಮ ಜೇಬಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಹೆಸರಲ್ಲಿ ಬಲವಂತವಾಗಿ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ಆರ್ಥಿಕತೆಯು ಕೆಲಸ ಮಾಡಲು ಸಾಮರಸ್ಯದ ವಾತಾವರಣ ಅತ್ಯಗತ್ಯ. ಹಾಗೆಯೇ ಇದಕ್ಕೆ ಸಾಮರಸ್ಯ, ಶಾಂತಿ ಮತ್ತು ಶಾಂತತೆ ಬೇಕು. ಆದರೆ ನೀವು ಅಲ್ಲಿಯೇ ಸಮಸ್ಯೆಗೆ ಸಿಲುಕುತ್ತಿದ್ದೀರಿ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

Last Updated : Mar 22, 2021, 4:53 PM IST

ABOUT THE AUTHOR

...view details