ಕರ್ನಾಟಕ

karnataka

By

Published : Jan 28, 2022, 7:28 AM IST

ETV Bharat / bharat

ಶೀಘ್ರವೇ ಸಿಎಂ ಅಭ್ಯರ್ಥಿ ಯಾರೆಂದು ನಿರ್ಧಾರ: ರಾಹುಲ್ ಗಾಂಧಿ

ಇಬ್ಬರು ವ್ಯಕ್ತಿಗಳನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಲು ಸಾಧ್ಯವಿಲ್ಲ. ಆದುದರಿಂದ ಸಿಎಂ ಯಾರಾಗಬೇಕೆಂದು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಇಬ್ಬರು ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಜಲಂಧರ್ (ಪಂಜಾಬ್):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪಂಜಾಬ್ ಪ್ರವಾಸ ಗುರುವಾರ ಮುಕ್ತಾಯಗೊಂಡಿದ್ದು, ಬಳಿಕ ಅವರು 'ನವಿ ಸೋಚ್ ನವ ಪಂಜಾಬ್' ಎಂಬ ಹೆಸರಿನ ವರ್ಚುಯಲ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು. ರ್‍ಯಾಲಿಗೆ ಎರಡು ಗಂಟೆಗಳಲ್ಲಿ 9 ಲಕ್ಷ ಜನರು ಸೇರಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಜನವರಿ 31ರವರೆಗೆ ಬಹಿರಂಗ ಸಭೆ, ಸಮಾರಂಭ, ಸಮಾವೇಶಗಳನ್ನು‌ ಆಯೋಜನೆ ಮಾಡುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿರುವುದರಿಂದ ರಾಜಕೀಯ ಪಕ್ಷಗಳು ಈಗ ಜನರನ್ನು ತಲುಪಲು ವಿಭಿನ್ನ ಮಾರ್ಗಗಳನ್ನು ಹುಡುಕಬೇಕಾಗಿದೆ. ಹೀಗಾಗಿ ಗುರುವಾರ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಎಲ್ಲಾ 117 ಅಭ್ಯರ್ಥಿಗಳು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಒಟ್ಟಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ‌ ಪೂಜೆ ಸಲ್ಲಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಳಿಕ ರಾಹುಲ್ ಗಾಂಧಿ ಅವರು ಜಲಂಧರ್‌ನ ಮಿಥಾಪುರದಲ್ಲಿ "ನವಿ ಸೋಚ್ ನಯಾ ಪಂಜಾಬ್' ಎಂಬ ಹೆಸರಿನ ವರ್ಚುಯಲ್ ರ್‍ಯಾಲಿ ಉದ್ದೇಶಿಸಿ ಭಾಷಣ ಮಾಡುತ್ತಾ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯ ವಿಷಯವನ್ನು ಪ್ರಸ್ತಾಪಿಸಿದರು.

ಚರಣಜಿತ್ ಸಿಂಗ್ ಚನ್ನಿ ಅಥವಾ ನವಜೋತ್ ಸಿಂಗ್ ಸಿಧು:ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ನಾವು ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುತ್ತೇವೆ. ಕಾರ್ಯಕರ್ತರ ನಿರ್ಧಾರವನ್ನು ಚರಣಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ಒಪ್ಪಿಕೊಳ್ಳಬೇಕು. ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. ಇಬ್ಬರು ವ್ಯಕ್ತಿಗಳನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಸಾಧ್ಯವಿಲ್ಲ, ಒಬ್ಬರು ಮಾತ್ರ ಆಗಬಹುದು ಎಂದು ರಾಹುಲ್​ ಸೂಚ್ಯವಾಗಿ ಹೇಳಿದರು.

ಈ‌‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಇಬ್ಬರು ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ. ಒಬ್ಬರು ಮುನ್ನಡೆಸಿದರೆ, ಮತ್ತೊಬ್ಬರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರಲ್ಲಿಯೂ ಕಾಂಗ್ರೆಸ್‌ ಚಿಂತನೆ ಇದೆ ಎಂದು ಇದೇ ಸಂದರ್ಭದಲ್ಲಿ ರಾಹುಲ್​ ತಿಳಿಸಿದರು.‌ ನಂತರ ಟ್ವೀಟ್​​ ಮಾಡಿ 'ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಘೋಷಿಸಲಾಗುವುದು' ಎಂದು‌ ರಾಹುಲ್​ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಭಾರತೀಯ ಚುನಾವಣಾ ಆಯೋಗವು ಭೌತಿಕ ರ್‍ಯಾಲಿಗಳ ಮೇಲೆ ನಿಷೇಧ ಹೇರಿದ ನಂತರ ರಾಹುಲ್ ಗಾಂಧಿಯವರ ಮೊದಲ ಭೇಟಿ ಇದಾಗಿತ್ತು.

ಇದನ್ನೂ ಓದಿ:Budget 2022: ಈ ಸಲವೂ ಕಾಗದ ರಹಿತ ಬಜೆಟ್​, ಮೊಬೈಲ್​​ ಅಪ್ಲಿಕೇಶನ್​​ನಲ್ಲೂ ಲಭ್ಯ

ABOUT THE AUTHOR

...view details