ನವದೆಹಲಿ:ಭದ್ರತೆಯ ಭರವಸೆಯಿಲ್ಲದ ಕಾರಣಕ್ಕೆ ಕಾಶ್ಮೀರ ಕಣಿವೆಗೆ ಮರಳಲು ಇಷ್ಟಪಡದ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಸಂಕಷ್ಟದ ಬಗ್ಗೆ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು. ಕೇಂದ್ರಾಡಳಿತ ಆಡಳಿತವು ಕಷ್ಟದಲ್ಲಿರುವವರ ಬಗ್ಗೆ ಗಮನಹರಿಸದೇ ಇರುವುದ ಸರಿಯಾದ ಕ್ರಮವಲ್ಲ ಎಂದು ಅವರು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದರು.
ಇತ್ತೀಚೆಗೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಮತ್ತು ಜಮ್ಮು- ಕಾಶ್ಮೀರ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವ ವಿಷಯದ ಬಗ್ಗೆ ಗಾಂಧಿ ಅವರು ಧ್ವನಿಯತ್ತಿದ್ದಾರೆ. ಕಣಿವೆ ಪ್ರದೇಶದಲ್ಲಿ ಭಯ ಮತ್ತು ಕತ್ತಲೆಯ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದರು. ಇಡೀ ಭಾರತವನ್ನು ಪ್ರೀತಿ ಮತ್ತು ಏಕತೆಯ ಆಧಾರದ ಮೇಲೆ ಒಂದುಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯಾತ್ರೆ ನಡೆಸಲಾಗಿದೆ. ಜಮ್ಮು ಲೆಗ್‌ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವನ್ನು ತಾವು ಭೇಟಿ ಮಾಡಿದ ಬಳಿಕ ಇಲ್ಲಿನ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಸೌಲಭ್ಯ ನೀಡಿ: "ಸರ್ಕಾರಿ ಅಧಿಕಾರಿಗಳು ತಮ್ಮನ್ನು ಕಾಶ್ಮೀರ ಕಣಿವೆಯಲ್ಲಿ ಕೆಲಸಕ್ಕೆ ಹಿಂತಿರುಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಶ್ಮೀರಿ ಪಂಡಿತರು ಹೇಳಿದರು. ಈ ವೇಳೆ, ಅವರ ಸುರಕ್ಷತೆ ಮತ್ತು ಭದ್ರತೆಯ ಯಾವುದೇ ಖಾತರಿಯಿಲ್ಲದೇ ಅವರನ್ನು ಕಣಿವೆಗೆ ಹಿಂತಿರುಗುವಂತೆ ಒತ್ತಾಯಿಸುವುದು ಸರಿಯಲ್ಲ ಎಂದರು. ಪರಿಸ್ಥಿತಿ ಸುಧಾರಿಸುವವರೆಗೆ, ಸರ್ಕಾರವು ಈ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಭದ್ರತೆ, ಇತರ ಆಡಳಿತ ಹಾಗೂ ಸಾರ್ವಜನಿಕ ಸೌಲಭ್ಯಗಳು ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ನ ಮಾಜಿ ಮುಖ್ಯಸ್ಥರು ಹಿಂದಿಯಲ್ಲಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
"ಕಾಶ್ಮೀರಿ ಪಂಡಿತರ ಸುರಕ್ಷತೆ ಹಾಗೂ ಅವರ ಕುಟುಂಬದ ಕಾಳಜಿವಹಿಸಬೇಕು. ಅವರು ಸರ್ಕಾರದಿಂದ ಸಹಾನುಭೂತಿ ಹಾಗೂ ಪ್ರೀತಿಯನ್ನು ನಿರೀಕ್ಷಿಸುವ ಸಮಯದಲ್ಲೇ, ಲೆಫ್ಟಿನೆಂಟ್ ಗವರ್ನರ್ ಅವರಿಗೆ ''ಭಿಕ್ಷುಕರು'' ಎಂಬ ಪದಗಳನ್ನು ಬಳಸಿರುವುದು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಪ್ರಧಾನಿ ನೀವು ಇಲ್ಲಿನ ಆಡಳಿತ ಮಾಡದಿರಬಹುದು. ಆದರೆ, ಈ ಸಂವೇದನಾರಹಿತ ಶೈಲಿಯ ಕಾರ್ಯಚಟುವಟಿಕೆ ಅರಿತುಕೊಳ್ಳಿ ಎಂದು ರಾಹುಲ್ ಪ್ರಧಾನಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.