ಕರ್ನಾಟಕ

karnataka

ETV Bharat / bharat

'ಮೋದಿ ಸರ್​ನೇಮ್' ಕುರಿತು ಹೇಳಿಕೆಗೆ ಮಾನನಷ್ಟ ಮೊಕದ್ದಮೆ: ಕೋರ್ಟ್ ಮುಂದೆ ರಾಹುಲ್​ ಹಾಜರು!?

ಮೋದಿ ಉಪನಾಮ ಹೊಂದಿರುವವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಬೇಕೆಂದು ಸೂರತ್‍ನ ಜಿಲ್ಲಾ ನ್ಯಾಯಾಲಯ ಸೂಚನೆ ನೀಡಿದೆ.

RAHUL GANDHI
RAHUL GANDHI

By

Published : Oct 29, 2021, 12:42 AM IST

Updated : Oct 29, 2021, 1:50 AM IST

ನವದೆಹಲಿ:2019ರ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಮೋದಿ ಸರ್​ನೇಮ್​ ಕುರಿತಾಗಿ ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲು ಮಾಡುವ ಉದ್ದೇಶದಿಂದ ಇಂದು ಕೋರ್ಟ್ ಮುಂದೆ ರಾಗಾ ಹಾಜರಾಗುವ ಸಾಧ್ಯತೆ ಇದೆ.

ಸೂರತ್​ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಮಧ್ಯಾಹ್ನ 3ರಿಂದ 6ರವರೆಗೆ ಕೋರ್ಟ್ ಮುಂದೆ ರಾಹುಲ್ ಹಾಜರಾಗುವ ಸಾಧ್ಯತೆ ಇದೆ ಎಂದು ಅವರ ಪರ ವಕೀಲರಾದ ಕಿರೀತ್​ ಪನ್ವಾಲಾ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಖುದ್ದಾಗಿ ರಾಹುಲ್ ಗಾಂಧಿಗೆ ಮೌಖಿಕ ಸೂಚನೆ ಸಹ ನೀಡಿದೆ.

ಇದನ್ನೂ ಓದಿರಿ:ಪುತ್ರನಿಗೆ ಜಾಮೀನು ಸಿಗುತ್ತಿದ್ದಂತೆ ವಕೀಲರನ್ನ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಶಾರುಖ್​!

ಏನಿದು ಪ್ರಕರಣ?

2019ರ ಲೋಕಸಭೆ ಚುನಾವಣೆ ವೇಳೆ ಭಾಷಣ ಮಾಡ್ತಿದ್ದ ರಾಹುಲ್ ಗಾಂಧಿ, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರು ಕಳ್ಳರಾಗಿ ತಪ್ಪು ಮಾಡಿದ್ದಾರೆ. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಎನ್​. ಧವೆ ರಾಹುಲ್​ ಗಾಂಧಿ ಖುದ್ದು ಕೋರ್ಟ್​ಗೆ ಹಾಜರಾಗಿ ಹೇಳಿಕೆ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆ.

Last Updated : Oct 29, 2021, 1:50 AM IST

ABOUT THE AUTHOR

...view details