ಕರ್ನಾಟಕ

karnataka

ETV Bharat / bharat

ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಇಂದು ವಯನಾಡ್​ಗೆ ರಾಹುಲ್​ ಗಾಂಧಿ ಮೊದಲ ಭೇಟಿ - ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರು ಇಂದು ತಮ್ಮ ಹಿಂದಿನ ಕ್ಷೇತ್ರವಾದ ಕೇರಳದ ವಯನಾಡ್​ ಆಗಮಿಸಲಿದ್ದಾರೆ.

rahul gandhi
ರಾಹುಲ್​ ಗಾಂಧಿ

By

Published : Apr 11, 2023, 10:55 AM IST

ವಯನಾಡ್ (ಕೇರಳ):ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಕೇರಳದ ತಮ್ಮ ಹಿಂದಿನ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಇಂದು ಭೇಟಿ ನೀಡಲಿದ್ದಾರೆ. ಇಲ್ಲಿನ ಕ್ಷೇತ್ರದ ಕಾಂಗ್ರೆಸ್ ನಾಯಕರು ರಾಹುಲ್​ ಭೇಟಿಗಾಗಿ ಭರ್ಜರಿ ವ್ಯವಸ್ಥೆಯನ್ನು ಮಾಡಿದ್ದಾರೆ. ರಾಹುಲ್​ ಗಾಂಧಿಯವರು ಯೋಜನೆ ಪ್ರಕಾರ ವಯನಾಡ್​ ಕ್ಷೇತ್ರಕ್ಕೆ ಆಗಮಿಸಿದ ನಂತರ ವಯನಾಡ್ ಜಿಲ್ಲೆಯ ಕೇಂದ್ರವಾದ ಕಲ್ಪೆಟ್ಟಾ ಪಟ್ಟಣದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದೇ ಮಾರ್ಚ್​ 23 ರಿಂದ ರಾಹುಲ್​ ಗಾಂಧಿಯವರು ಲೋಕಸಭೆಯ ಸಂಸದರಾಗಿ ಅನರ್ಹಗೊಂಡಾಗಿನಿಂದ ಕೇಂದ್ರದ ಆಡಳಿತ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ತಮ್ಮ ಟೀಕಾ ದಾಳಿಯನ್ನು ನಡೆಸುತ್ತಿದ್ದಾರೆ. ಇದಲ್ಲದೇ ಕಾಂಗ್ರೆಸ್ ನಾಯಕ ಈಗ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿಯೊಂದಿಗಿನ ಸಂಬಂಧಗಳ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ.

ರಾಹುಲ್​ ಗಾಂಧಿಯವರು, 2019 ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉಪನಾಮ ಮಾನನಷ್ಟ ಮಾಡಿದ್ದರಿಂದ, 2023ರ ಮಾರ್ಚ್​ರಂದು ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಇದರಿಂದ ರಾಹುಲ್​ ಗಾಂಧಿಯವರು ಸಂಸತ್ತಿನಿಂದ ಅನರ್ಹಗೊಂಡರು. ಇದಾದ ಮೇಲೆ ಪಕ್ಷ ವಿಪಕ್ಷಗಳ ನಡುವೆ ಟೀಕಾ ಪ್ರಹಾರ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ರಾಹುಲ್​ ಗಾಂಧಿ ಲೋಕಸಭೆಯಲ್ಲಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುವುದನ್ನು ನಿಲ್ಲಿಸಿದ್ದಾರೆ. ವಯನಾಡ್​ ಕ್ಷೇತ್ರ ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ಎರಡನೇ ಸ್ಥಾನವಾಗಿ ವಯನಾಡ್‌ನಿಂದ ಸ್ಪರ್ಧಿಸಿದ್ದರು. ಮತ್ತು ಅವರು ತಮ್ಮ ಪ್ರತಿಸ್ಪರ್ಧಿ ಸಿಪಿಐ ಅಭ್ಯರ್ಥಿ ಪಿಪಿ ಸುನೀರ್‌ಗಿಂತ 4,31,779 ಕ್ಕೂ ಹೆಚ್ಚು ಮತಗಳ ದಾಖಲೆಯ ಅಂತರದಲ್ಲಿ ಗೆದ್ದಿದ್ದರು. ಆದರೆ ಅದೇ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಾದ ಉತ್ತರ ಪ್ರದೇಶದ ಅಮೇಥಿ LS ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ 50,000 ಮತಗಳ ಅಂತರದಿಂದ ರಾಹುಲ್​ ಗಾಂಧಿಯನ್ನೇ ಸೋಲಿಸಿದ್ದರು. ಇನ್ನು ಕೇರಳದ ವಯನಾಡ್​ ಕ್ಷೇತ್ರವು ಹೆಚ್ಚಿನ ಸಾಕ್ಷರತೆಯ ಮಟ್ಟವನ್ನು ಹೊಂದಿದ್ದು, ಈ ಜಿಲ್ಲೆ ಪ್ರಬಲ ಕ್ರಿಶ್ಚಿಯನ್ ಸಮುದಾಯವನ್ನು ಹೊಂದಿದೆ.

ರಾಹುಲ್​ ಗಾಂಧಿ ಪ್ರಕರಣ ಮತ್ತು ಅನರ್ಹವೇಕೆ?:2019 ರಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ 'ಮೋದಿ' ಉಪನಾಮದ ಕುರಿತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸೂರತ್ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್. ವರ್ಮಾ ಅವರಿದ್ದ ಪೀಠ ಪ್ರಕರಣದಲ್ಲಿ ರಾಹುಲ್​ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಇದಲ್ಲದೇ, ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿತ್ತು.

ಬಳಿಕ ರಾಹುಲ್​ ಮನವಿಯ ಮೇರೆಗೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿತ್ತು. ಕೇಸ್​ನಲ್ಲಿ ತಮಗೆ ವಿಧಿಸಲಾದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್​ ತಿಳಿಸಿತ್ತು. ಯಾವುದೇ ಸಂಸದರು ಅಥವಾ ಶಾಸಕರು ಕ್ರಿಮಿನಲ್​ ಪ್ರಕರಣದಲ್ಲಿ ತಪ್ಪಿತಸ್ಥರಾದರೆ, 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಸ್ವಯಂಚಾಲಿತವಾಗಿ ಅವರ ಸ್ಥಾನಮಾನ ಅನರ್ಹಗೊಳ್ಳುತ್ತದೆ ಎಂಬ ನಿಯಮವಿದೆ.

ಇದನ್ನೂ ಓದಿ:ಇಂದು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ABOUT THE AUTHOR

...view details