ಕರ್ನಾಟಕ

karnataka

ETV Bharat / bharat

ಫೆ.28 ರಂದು ಎಂಕೆ ಸ್ಟಾಲಿನ್ ಆತ್ಮಕಥೆ ಬಿಡುಗಡೆ ಮಾಡಲಿರುವ ರಾಹುಲ್ ಗಾಂಧಿ - ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆತ್ಮಚರಿತ್ರೆ 'ಉಂಗಲಿಲ್ ಒರುವನ್ - ಭಾಗ 1

ಆತ್ಮಚರಿತ್ರೆಯ ಮೊದಲ ಭಾಗವು ಸಿಎಂ ಸ್ಟಾಲಿನ್ ಅವರ ಬಾಲ್ಯದ ಜೀವನ, ಅವರ ಆರಂಭಿಕ ರಾಜಕೀಯ ದಿನಗಳು ಮತ್ತು 1975 ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು MISA ಕಾಯ್ದೆಯಡಿ ಜೈಲಿನಲ್ಲಿಡುವವರೆಗೆ ವಿವರಿಸುತ್ತದೆ.

Rahul Gandhi to release CM Stalin autobiography
ಸ್ಟಾಲಿನ್ ಆತ್ಮಕಥೆಯನ್ನು ಬಿಡುಗಡೆ ಮಾಡಲಿರುವ ರಾಹುಲ್ ಗಾಂಧಿ

By

Published : Feb 25, 2022, 9:06 PM IST

ಚೆನ್ನೈ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆತ್ಮಚರಿತ್ರೆ 'ಉಂಗಲಿಲ್ ಒರುವನ್ - ಭಾಗ 1' ದನ್ನು, ಫೆಬ್ರವರಿ 28 ರಂದು ಚೆನ್ನೈದ ನಂದಂಬಾಕ್ಕಂ ಟ್ರೇಡ್ ಸೆಂಟರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಜೆ & ಕೆ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮಧ್ಯರಾತ್ರಿ ನಡೆಯಿತು ಆಟೋ ರೇಸ್​​: ವಿಡಿಯೋ ವೈರಲ್​​

ರಾಜ್ಯದ ಮಾಜಿ ಸಿಎಂಗಳಾದ ಎಐಎಡಿಎಂಕೆ ಸಂಯೋಜಕರಾದ ಎಡಪ್ಪಾಡಿ ಕೆ ಪಳನಿಸಾಮಿ, ಓ ಪನೀರ್‌ಸೆಲ್ವಂ ಜೊತೆಗೆ ಪಿಎಂಕೆ ಸಂಸ್ಥಾಪಕ ರಾಮದಾಸ್, ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್, ಎಂಎನ್‌ಎಂ ಮುಖ್ಯಸ್ಥ, ನಟ ಕಮಲ್ ಹಾಸನ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಸಮಾರಂಭಕ್ಕೆ ಸಿಎಂ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸ್ಟಾಲಿನ್ ಅವರ ಪ್ರತಿನಿಧಿಯೊಬ್ಬರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ, ಅವರ ನಿವಾಸದಲ್ಲಿ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಚರಿತ್ರೆಯ ಮೊದಲ ಭಾಗವು ಸಿಎಂ ಸ್ಟಾಲಿನ್ ಅವರ ಬಾಲ್ಯದ ಜೀವನ, ಅವರ ಆರಂಭಿಕ ರಾಜಕೀಯ ದಿನಗಳು ಹಾಗೂ 1975 ರ ತುರ್ತು ಸಂದರ್ಭದಲ್ಲಿ ಅವರು MISA ಕಾಯಿದೆಯಡಿಯಲ್ಲಿ ಜೈಲಿನಲ್ಲಿಡುವವರೆಗೆ ವಿವರಿಸುತ್ತದೆ.

ABOUT THE AUTHOR

...view details