ಕರ್ನಾಟಕ

karnataka

ETV Bharat / bharat

ತಮಿಳುನಾಡು ರೈತರು, ಕಾರ್ಮಿಕರು, ನೇಕಾರರೊಂದಿಗೆ ಚರ್ಚಿಸಲಿರುವ ರಾಹುಲ್​ ಗಾಂಧಿ

ಜ.23 ರಿಂದ ಜ.25ರ ವರೆಗೆ ತಮಿಳುನಾಡಿಗೆ ರಾಹುಲ್​ ಗಾಂಧಿ ಮೂರು ದಿನಗಳ ಭೇಟಿ ನೀಡಲಿದ್ದು, ರೈತರು ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

Rahul Gandhi
ರಾಹುಲ್​ ಗಾಂಧಿ

By

Published : Jan 22, 2021, 2:28 PM IST

ನವದೆಹಲಿ: ಜನವರಿ 23ರಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಮಿಳುನಾಡಿಗೆ ಭೇಟಿ ನೀಡಲಿದ್ದು, ರೈತರು, ಕಾರ್ಮಿಕರು ರೈತರು, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ (ಎಂಎಸ್‌ಎಂಇ) ಪ್ರತಿನಿಧಿಗಳು ಮತ್ತು ನೇಕಾರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ರಾಜ್ಯದ ಕಾಂಗ್ರೆಸ್​ ಉಸ್ತುವಾರಿ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.

ರೈತರ ಚಳವಳಿ ಇಂದು ದೇಶಾದ್ಯಂತ ದೊಡ್ಡ ವಿಷಯವಾಗಿದ್ದು, ಕಾಂಗ್ರೆಸ್​ ಪಕ್ಷವು ಆರಂಭದಿಂದಲೂ ಬೆಂಬಲ ನೀಡುತ್ತಾ ಬಂದಿದೆ. ರಾಹುಲ್​ ಗಾಂಧಿ ನೇತೃತ್ವದಲ್ಲಿ ಈ ಬಗ್ಗೆ ಅನೇಕ ಕಾರ್ಯಕ್ರಮ ಹಾಗೂ ಧರಣಿಗಳನ್ನು ಮಾಡಲಾಗಿದೆ. ತಮಿಳುನಾಡಿಗೆ ಭೇಟಿ ನೀಡಿದ ವೇಳೆಯೂ ವಿವಿಧ ಕ್ಷೇತ್ರಗಳ ಕಾರ್ಮಿಕರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಗುಂಡೂರಾವ್ ಹೇಳಿದರು.

ಇದನ್ನೂ ಓದಿ: ಮೇ 29 ರಂದು ಕಾಂಗ್ರೆಸ್ ಅಧಿವೇಶನ..!

ಕೇಂದ್ರ ಸರ್ಕಾರ ಕೇವಲ ಕಾರ್ಪೋರೇಟ್​ ವಲಯದ ಮೇಲೆ ಮಾತ್ರ ಕಾಳಜಿ ಹೊಂದಿದ್ದು, ರೈತರ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಕೇಂದ್ರದ ಬಿಜೆಪಿ ಸರ್ಕಾರವು ಹಠಮಾರಿ, ಸೊಕ್ಕಿನ ಸರ್ಕಾರವಾಗಿದ್ದು, ಅದು ರೈತರು ಏನು ಹೇಳುತ್ತಿದ್ದಾರೆಂಬುದನ್ನು ಕೇಳಲೂ ಬಯಸುವುದಿಲ್ಲ ಎಂದು ದಿನೇಶ್​ ಗುಂಡೂರಾವ್​ ಆರೋಪಿಸಿದರು.

ಜ.23 ರಿಂದ ಜ.25ರ ವರೆಗೆ ತಮಿಳುನಾಡಿಗೆ ರಾಹುಲ್​ ಗಾಂಧಿ ಮೂರು ದಿನಗಳ ಭೇಟಿ ನೀಡಲಿದ್ದಾರೆ.

ABOUT THE AUTHOR

...view details