ನವದೆಹಲಿ:ಲೋಕಸಭೆಯಲ್ಲಿ ಇಂದು ನಡೆಯುವ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊದಲಿಗರಾಗಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯಲ್ಲಿ ವಂದನಾ ನಿರ್ಣಯದ ವೇಳೆ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚಿಸಲು ವಿರೋಧ ಪಕ್ಷಗಳಿಗೆ 12 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಇದರಲ್ಲಿ ಕಾಂಗ್ರೆಸ್‌ಗೆ 1 ಗಂಟೆ ನೀಡಲಾಗಿದೆ, ಈ ವೇಳೆ ಕಾಂಗ್ರೆಸ್ ಪರವಾಗಿ ಮೊದಲಿಗರಾಗಿ ರಾಹುಲ್ ಗಾಂಧಿ ಮಾತು ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಪಕ್ಷಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದು, ಅಧ್ಯಕ್ಷೀಯ ಭಾಷಣದ ಮೇಲಿನ ಚರ್ಚೆಯನ್ನು ರಾಹುಲ್ ಗಾಂಧಿ ಶುರು ಮಾಡಲಿದ್ದಾರೆ. ಈ ವೇಳೆ ಅವರು, ಪೆಗಾಸಸ್ ಸಾಫ್ಟ್ವೇರ್ ಸ್ಪೈವೇರ್ ವಿಷಯವನ್ನು ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ.