ಕರ್ನಾಟಕ

karnataka

ETV Bharat / bharat

ಕೇಂದ್ರ ಸರ್ಕಾರಕ್ಕೆ ಬಂಡವಾಳ ಶಾಹಿಗಳದ್ದೇ ಚಿಂತೆ, ರೈತರು ಲೆಕ್ಕಕ್ಕೇ ಇಲ್ಲ : ರಾಹುಲ್​ ಗಾಂಧಿ ಆರೋಪ

ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 54 ನೇ ದಿನಕ್ಕೆ ಕಾಲಿಟ್ಟಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ಟ್ವೀಟ್​ ಮೂಲಕ ಮತ್ತೆ ಗುಡುಗಿದ್ದಾರೆ.

rahul gandhi targets modi govt over farmers protest
ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ ರಾಹುಲ್​ ಗಾಂಧಿ

By

Published : Jan 18, 2021, 12:43 PM IST

ನವದೆಹಲಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 54 ನೇ ದಿನಕ್ಕೆ ಕಾಲಿಟ್ಟಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್​ ಗಾಂಧಿ ಮೋದಿ ಸರ್ಕಾರ ತಮ್ಮ ಬಂಡವಾಳ ಶಾಹಿ ಸ್ನೇಹಿತರಿಗೆ 875,000 ಕೋಟಿ ರೂ ಮಾಪಿ ಮಾಡಿದೆ. ಆದರೆ ನೀವು ರೈತರಿಗೆ ಏನು ಕೊಟ್ಟಿದ್ದೀರಿ. ನೀವು ಬಂಡವಾಳ ಶಾಹಿಗಳನ್ನು ಬೆಳಸುವಲ್ಲಿ ನಿರತರಾಗಿರುವ ನಿಮಗೆ ರೈತರ ಕೂಗು ಕೇಳಿಸುತ್ತಿಲ್ಲವೇ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ರೈತ ಸಂಘಟನೆಗಳು ಮತ್ತು ಸರ್ಕಾರದ ನಡುವೆ ನಡೆದ ಒಂಬತ್ತನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದಿನಾಂಕಗಳನ್ನು ನೀಡಿ ಮುಂದೂಡುವುದು ಸರ್ಕಾರದ ತಂತ್ರವಾಗಿದೆ ಎಂದು ಆರೋಪಿಸಿದ್ದರು.

ಓದಿ : ಟ್ರ್ಯಾಕ್ಟರ್​ ಪರೇಡ್ ತಡೆಗೆ ಯಾವುದೇ ಆದೇಶ ನೀಡಲು ಸುಪ್ರೀಂ ನಕಾರ: ಅರ್ಜಿ ವಿಚಾರಣೆ ಮುಂದೂಡಿಕೆ

ABOUT THE AUTHOR

...view details