ನವದೆಹಲಿ: ಗುರುವಾರವಷ್ಟೇ ವ್ಯಾಕ್ಸಿನ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಹಣದುಬ್ಬರ ಹೆಚ್ಚಾಗುತ್ತಿದೆ. 'ಒಳ್ಳೆಯ ದಿನಗಳು' ದೇಶಕ್ಕೆ ಹೊರೆಯಾಗುತ್ತಿವೆ. ತನ್ನ ಸ್ನೇಹಿತರಿಗೆ ಮಾತ್ರ ಪ್ರಧಾನಿ ಮೋದಿ ಉತ್ತರ ನೀಡಲು ಶಕ್ತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪಿಎನ್ಜಿ, ಸಿಎನ್ಜಿ ಹೈಕ್ ಎಂದು ಹ್ಯಾಷ್ಟ್ಯಾಗ್ ಅನ್ನು ಬಳಸಿದ್ದಾರೆ. ಗುರುವಾರವಷ್ಟೇ ವ್ಯಾಕ್ಸಿನ್ ಪೂರೈಕೆ ವಿಚಾರದಲ್ಲಿ ಬದಲಾವಣೆ ತನ್ನಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.