ನವದೆಹಲಿ: ಸದಾ ಒಂದಿಲ್ಲೊಂದು ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದೀಗ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಇದರ ಪ್ರಕಾರ 'ನಿಮಗೆ ತಾಕತ್ತಿದ್ದರೆ ನಮ್ಮನ್ನು ತಡೆಯಿರಿ ಎಂದು ದೇಶದ 133 ಕೋಟಿ ಭಾರತೀಯರಿಗೆ ಸವಾಲು ಹಾಕಿದ್ದಾರೆಂದು' ಹೇಳಿದ್ದಾರೆ.
ದೇಶದಲ್ಲಿ ನಿರಂತರವಾಗಿ ಅಡುಗೆ ಅನಿಲ ದರ ಏರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು 'ನಿಮಗೆ ತಾಕತ್ತಿದ್ದರೆ, ನಮ್ಮನ್ನು ತಡೆಯಿರಿ ಎಂದು ದೇಶದ 133 ಕೋಟಿ ಭಾರತೀಯರಿಗೆ ಸವಾಲು ಹಾಕುತ್ತಿದ್ದಾರೆಂದು' ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ LPG ಬೆಲೆ ಶೇ. 157ರಷ್ಟು ಏರಿಕೆಯಾಗಿದೆ. ಇಂಧನದ ಬೆಲೆ ಗಗನಕ್ಕೇರಿದ್ದು, ಗಬ್ಬರ್ ಟ್ಯಾಕ್ಸ್ ಲೂಟಿ ಮತ್ತು ನಿರುದ್ಯೋಗ ಸುನಾಮಿ ಉಂಟಾಗಿದೆ. ಇದನ್ನೆಲ್ಲ 133 ಕೋಟಿ ಭಾರತೀಯರು ತಡೆಯಿರಿ ಎಂದು ಪ್ರಧಾನಿ ಸವಾಲು ಹಾಕುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿರಿ:LPG ಬೆಲೆ ಏರಿಕೆ: ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಎಲ್ಪಿಜಿ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಿತ್ತು. ಇದೇ ವಿಷಯವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕೇಂದ್ರ ಬಿಜೆಪಿ ಕೇವಲ ಮುಖ್ಯಾಂಶ ನಿರ್ವಹಿಸುತ್ತಿದ್ದು, ಆರ್ಥಿಕತೆ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ. ದೇಶದ ಆರ್ಥಿಕತೆ ಹಾಳು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು.