ಕರ್ನಾಟಕ

karnataka

ETV Bharat / bharat

ಲಸಿಕೆ ವಿಚಾರ... ಮತ್ತೆ ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ಕೆಂಡಾಮಂಡಲ - ನವದೆಹಲಿ

ರಾಜ್ಯಗಳಲ್ಲಿ ಲಸಿಕೆ ಕೊರತೆ ಸಂಬಂಧ ರಾಹುಲ್​ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು,ಹಲವು ಪತ್ರಿಕೆಗಳ ಕಟ್ಟಿಂಗ್ಸ್​ಗಳನ್ನು ಟ್ವೀಟ್​​ಗೆ ಅಂಟಿಸಿ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸಿದ್ದಾರೆ.

rahul-gandhi
ರಾಹುಲ್​ ಗಾಂಧಿ

By

Published : Jul 14, 2021, 11:42 AM IST

ನವದೆಹಲಿ:ಕೋವಿಡ್​ ಲಸಿಕೆಗಳ ಕೊರತೆ ಬಗ್ಗೆ ಮತ್ತೊಮ್ಮೆ ರಾಹುಲ್​ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರದ ವೈಫಲ್ಯವನ್ನು ಎತ್ತಿತೋರಿಸಲು ಅವರು, ತಮ್ಮ ಟ್ವೀಟ್​ಗೆ ಪೇಪರ್​ಗಳ ಕಟ್ಟಿಂಗ್ಸ್​ಗಳನ್ನು ಟ್ಯಾಗ್​ ಮಾಡಿದ್ದಾರೆ. 'WhereAreVaccines ಎಂಬ ಹ್ಯಾಷ್​ ಟ್ಯಾಗ್​ ಮೂಲಕ ಜುಮ್ಲೆ ಹೈನಾ, ವ್ಯಾಕ್ಸಿನ್​ ನಹಿ ಎಂದು ಟ್ವೀಟ್​ ಮಾಡಿದ್ದಾರೆ. ಇನ್ನು ನಿನ್ನೆ ಕಾಂಗ್ರೆಸ್​ ನಾಯಕ ಪಿ ಚಿದಂಬರಂ ಕೂಡಾ ಎಮ್ಟಿ ಬೋಸ್ಸ್​​ ಫಾಲ್ಸ್​ ಪ್ರಾಮಿಸ್​ ("empty boast" and a "false promise")ಎಂದು ಟ್ವೀಟ್​ ಮಾಡುವ ಮೂಲಕ ಕೇಂದ್ರದ ಸುಳ್ಳು ಭರವಸೆ ಬಗ್ಗೆ ವಾಗ್ದಾಳಿ ನಡೆಸಿದ್ದರು.

ನಿಧಾನಗತಿಯಲ್ಲಿ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್​​ ತನ್ನ ವಾಗ್ದಾಳಿ ಮುಂದುವರಿಸಿದೆ. ಆದರೆ ಆರೋಗ್ಯ ಇಲಾಖೆ ರಾಜ್ಯಗಳ ಬಳಿ 1ಕೋಟಿ 91 ಲಕ್ಷ ಡೋಸ್​ ಲಭ್ಯ ಇದೆ ಎಂದು ಹೇಳಿದೆ.

ಇನ್ನೊಂದೆಡೆ ದೇಶದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಬಗ್ಗೆಯೂ ರಾಹುಲ್​ ಗಾಂಧಿ ಹರಿಹಾಯ್ದಿದ್ದಾರೆ.

ABOUT THE AUTHOR

...view details