ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ಮುಂದುವರೆಸಿದ್ದಾರೆ. ವ್ಯಾಕ್ಸಿನ್ ಕೊರತೆ, ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಸದ್ಯದ ಪರಿಸ್ಥಿತಿ, ಬೆಲೆ ಏರಿಕೆ ಮುಂದಾದ ವಿಚಾರಗಳ ಬಗ್ಗೆ ಕಿಡಿಕಾರಿದ್ದಾರೆ.
ಶತಮಾನಗಳಿಂದ ಕಟ್ಟಿದ್ದನ್ನು ಕ್ಷಣಗಳಲ್ಲಿ ಅಳಿಸಲಾಗಿದೆ. ಸಂಕಷ್ಟದ ಸ್ಥಿತಿಯನ್ನು ತಂದವರು ಯಾರು ಎಂಬುದು ದೇಶಕ್ಕೆ ಗೊತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವ್ಯಾಕ್ಸಿನ್ ಕೊರತೆ, ಎಲ್ಎಸಿ(ಭಾರತ-ಚೀನಾ ಗಡಿ ನಿಯಂತ್ರಣ ರೇಖೆ) ನಿರುದ್ಯೋಗ, ಬೆಲೆ ಏರಿಕೆ, ಸರ್ಕಾರಿ ಸ್ವಾಯುತ್ತ ಸಂಸ್ಥೆಗಳು, ರೈತರು ಎಂಬ ಪದಗಳಿಗೆ ರಾಹುಲ್ ಗಾಂಧಿ ಹ್ಯಾಷ್ಟ್ಯಾಗ್ ಬಳಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಬುಧವಾರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಗಾಲ್ವನ್ ಕಣಿವೆಯಲ್ಲಿನ ಸ್ಥಿತಿಯ ಬಗ್ಗೆ ಮಾಧ್ಯಮದ ವರದಿಯೊಂದನ್ನು ಹಂಚಿಕೊಂಡಿದ್ದರು. ಅದಕ್ಕೂ ಮೊದಲು ವ್ಯಾಕ್ಸಿನ್ ಕೊರತೆ ವಿರುದ್ದ ಕೇಂದ್ರ ಆರೋಗ್ಯ ಸಚಿವರಿಗೆ ಹೊಸ ನೀತಿ ಪಾಲಿಸುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ:ಮುತ್ತಿನ ನಗರಿಯಲ್ಲಿ ಭೋರ್ಗರೆದ ವರುಣ: ನದಿಯಂತಾದ ರಸ್ತೆಗಳು, ಕಾಲೋನಿಗಳು ಜಲಾವೃತ