ನವದೆಹಲಿ:" ಮಿಸ್ಟರ್ 56 ಇಂಚು ಚೀನಾಗೆ ಹೆದರುತ್ತಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಕ್ಲಿಪ್ ಮೂಲಕ ಟ್ವೀಟ್ ಮಾಡಿ ಪ್ರಧಾನಿ ಮೋದಿ ಕುರಿತು ವ್ಯಂಗ್ಯವಾಡಿದ್ದಾರೆ.
ಚೀನಾ ಬಿಕ್ಕಟ್ಟು ಕುರಿತಂತೆ ಮಾಧ್ಯಮಗಳ ಸುದ್ದಿಗಳ ವಿಡಿಯೋ ಹಂಚಿಕೊಂಡಿರುವ ರಾಹುಲ್.. ಭಾರತ ಮತ್ತು ಚೀನಾ ಗಡಿ ಸಮಸ್ಯೆ.. ಯುದ್ಧೋಪಕರಣ ಹೀಗೆ ಹಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋಗಳಿಗೆ ''ಕ್ರೊನೋಲಜಿ ಸಮ್ಜಾಯಿಯೇ''(ಕ್ರೊನೋಲಜಿ ಅರ್ಥಮಾಡಿಕೊಳ್ಳಿ) ಎಂದು ಶೀರ್ಷಿಕೆ ನೀಡಿದ್ದು, ಕಳೆದ ವರ್ಷ ಮೇ 5 ರಂದು ಪೂರ್ವ ಲಡಾಖ್ ನಲ್ಲಿ ಭುಗಿಲೆದ್ದ ಭಾರತ-ಚೀನಾ ಸೇನೆಯ ಬಿಕ್ಕಟ್ಟಿನ ಸುದ್ದಿ ವರದಿಗಳು ಇದರಲ್ಲಿವೆ.
ಭಾರತ-ಚೀನಾ ಸೇನಾ ಸಂಘರ್ಷದ ಕುರಿತು ರಾಹುಲ್ ಗಾಂಧಿ ಪ್ರಧಾನಿ ಮೋದಿ ಮತ್ತು ಕೇಂದ್ರದ ಮೇಲೆ ದಾಳಿ ಮಾಡುವುದು ಇದೇ ಮೊದಲಲ್ಲ. ಜುಲೈನಲ್ಲಿ, ಡೆಮ್ಚೋಕ್ನಲ್ಲಿ ಚೀನಾದ ಕ್ರಮದ ವರದಿಗಳ ಕುರಿತು ರಾಹುಲ್ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಚೀನಾದ ವಿಚಾರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ, ಸಮಸ್ಯೆಗಳನ್ನು ಉಂಟುಮಾಡುವ ಅವರ ಕ್ರಮಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.
"ಭಾರತ ಸರ್ಕಾರವು ಚೀನಾದ ನಡೆಯನ್ನು ಈಗ ನಿರ್ಲಕ್ಷಿಸುವುದರಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳು ಉಂಟಾಗುತ್ತವೆ" ಎಂದು ಸಂಸದ ರಾಹುಲ್ ಗಾಂಧಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಕ್ವಾಡ್ ನಾಯಕರೊಂದಿಗಿನ ಚರ್ಚೆ ಫಲಪ್ರದವಾಗಿದೆ: ಪ್ರಧಾನಿ ಮೋದಿ ಟ್ವೀಟ್