ನವದೆಹಲಿ: ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಏನು ಸಾಧಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಸಾಧನೆಯನ್ನು ಮೋದಿ, ಕಳೆದ ಏಳು ವರ್ಷಗಳಲ್ಲಿ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಕುಟುಕಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ‘ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ಸಿಗರು ಏನು ನಿರ್ಮಿಸಿದ್ದರೋ, ಅದನ್ನು ಮೋದಿ ಏಳು ವರ್ಷಗಳಿಂದ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದಾರೆ. ‘ಅವರು ಬಂದರು, ಅವರು ನೋಡಿದರು, ಅವರು ಮಾರಿದರು’ ಎಂಬ ಶೀರ್ಷಿಕೆಯಡಿ ಈ ಪೋಸ್ಟ್ ಹಾಕಿದ್ದಾರೆ.
ಕೋವಿಡ್ ಹೆಚ್ಚಳಕ್ಕೆ ರಾಗಾ ಕಳವಳ
ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವುದಕ್ಕೆ ಕಳವಳ ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ. ಹೆಚ್ಚುತ್ತಿರುವ ಕೋವಿಡ್ ಸಂಖ್ಯೆಗಳು ಆತಂಕಕಾರಿಯಾಗಿವೆ. ಮುಂದಿನ ಅಲೆ ತಡೆಗಟ್ಟಲು ವ್ಯಾಕ್ಸಿನೇಷನ್ ಶೀಘ್ರಗತಿಯಲ್ಲಿ ಸಾಗಬೇಕಿದೆ. ನಿಮ್ಮನ್ನು ನೀವೇ ಸುರಕ್ಷಿತವಾಗಿರಿಸಿಕೊಳ್ಳಿ. ಏಕೆಂದರೆ ಭಾರತ ಸರ್ಕಾರ ಮಾರಾಟದಲ್ಲಿ ಬ್ಯುಸಿಯಾಗಿದೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಪಂಜಾಬ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸೋನು ಸೂದ್?.. ಕುತೂಹಲ ಮೂಡಿಸಿದ ಕೇಜ್ರಿ - ಸೂದ್ ಭೇಟಿ
ಮಂಗಳವಾರ, ರಾಹುಲ್ಗಾಂಧಿ ಕೇಂದ್ರದ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಅನ್ನು ದೊಡ್ಡ ದುರಂತ ಎಂದು ಕರೆದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿದೆ. ಈ ಕ್ರಮವು ಕೆಲವು ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ರು.