ಕರ್ನಾಟಕ

karnataka

ETV Bharat / bharat

ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನಿರಾಕರಣೆ: ಕೇಂದ್ರದ ವಿರುದ್ಧ ರಾಗಾ ಕಿಡಿ

ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ.ಗಳ ಎಕ್ಸ್​ ಗ್ರೇಟಿಯಾ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

rahul-gandhi-slams-centre-
:ಕೇಂದ್ರದ ವಿರುದ್ಧ ರಾಗಾ ಕಿಡಿ

By

Published : Jun 21, 2021, 3:52 PM IST

Updated : Jun 21, 2021, 8:38 PM IST

ನವದೆಹಲಿ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಎಕ್ಸ್ ಗ್ರೇಷಿಯಾ ಪಾವತಿಸದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೀವಕ್ಕೆ ಬೆಲೆ ಕಟ್ಟಲು ಅಸಾಧ್ಯ, ಸರ್ಕಾರ ಈ ಪರಿಹಾರ ನೀಡಿದ್ರೆ ಸಣ್ಣ ಸಹಾಯವಾಗುತ್ತದೆ. ಆದರೆ, ಮೋದಿ ಸರ್ಕಾರ ಅದನ್ನು ಮಾಡಲು ಸಹ ಸಿದ್ಧವಾಗಿಲ್ಲ ಎಂದು ಕಿಡಿ ಕಾರಿದ್ದಾರೆ.

ಕೋವಿಡ್ ಸಮಯದಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಒದಗಿಸದೇ ಸುಳ್ಳು ಅಂಕಿ - ಅಂಶಗಳನ್ನು ನೀಡಿ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುತ್ತಿದೆ ಎಂದು ರಾಗಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೈತರಿಗೆ ಸಹಾಯ ಮಾಡಿ: ಪತ್ರ ಬರೆದ ಪ್ರಿಯಾಂಕಾ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಪತ್ರ ಬರೆದು ರೈತರಿಂದ ಗೋಧಿ ಖರೀದಿಸಿ ಎಂದು ಒತ್ತಾಯಿಸಿದ್ದಾರೆ.

ಜುಲೈ 15ರೊಳಗೆ ರಾಜ್ಯದ ಎಲ್ಲಾ ಖರೀದಿ ಕೇಂದ್ರಗಳನ್ನು ತೆರೆಯಲು ಯೋಗಿಗೆ ಕೋರಿದ್ದಾರೆ. ರೈತರು ತಮ್ಮ ಆಹಾರ ಧಾನ್ಯಗಳನ್ನು ಮಾರಾಟ ಮಾಡಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಖರೀದಿ ಕೇಂದ್ರಗಳನ್ನು ನಿರ್ಮಿಸಿ ರೈತರಿಗೆ ನೆರವಾಗಿ ಎಂದು ಪತ್ರದ ಮುಖೇನಾ ಒತ್ತಾಯಿಸಿದ್ದಾರೆ.

ಓದಿ:ಪಾರಂಪರಿಕ ಕಟ್ಟಡ ನವೀಕರಣ ಆರೋಪ; ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

Last Updated : Jun 21, 2021, 8:38 PM IST

ABOUT THE AUTHOR

...view details