ಶಿವಸಾಗರ್(ಅಸ್ಸೋಂ) : ಅಸ್ಸೋಂ ಚಹಾ ತೋಟದ ಕಾರ್ಮಿಕರಿಗೆ 365 ರೂ. ದಿನಗೂಲಿಯನ್ನು ನಾವು ತಂದು ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಶಿವಸಾಗರ್ನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗುಜರಾತ್ ವ್ಯಾಪಾರಿಗಳಿಗೆ ಚಹಾ ತೋಟ ಸಿಗುವಾಗ, ಅಸ್ಸೋಂ ಚಹಾ ತೋಟದ ಕಾರ್ಮಿಕರು ದಿನಕ್ಕೆ 167 ರೂ. ಕೂಲಿ ಪಡೆಯುತ್ತಿದ್ದಾರೆ. ಗುಜರಾತ್ ವ್ಯಾಪಾರಿಗಳಿಂದ ಹಣ ತಂದು, ಚಹಾ ತೋಟದ ಕಾರ್ಮಿಕರಿಗೆ ₹365 ದಿನಗೂಲಿ ನೀಡುವುದಾಗಿ ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.