ಕರ್ನಾಟಕ

karnataka

ETV Bharat / bharat

'ಕೇಂದ್ರದ ಆರ್ಥಿಕ ಪ್ಯಾಕೇಜ್​ ಒಂದು ಕುಟುಂಬದ ದೈನಂದಿನ ಅಗತ್ಯತೆಗಳನ್ನೂ ಪೂರೈಸದು" - Rahul gandhi over central government economic package

ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್​ ಒಂದು ಕುಟುಂಬದ ದೈನಂದಿನ ಅಗತ್ಯತೆಗಳನ್ನೂ ಸಹ ಪೂರೈಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಲ್ಲದೇ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸಹ ಈ ಪ್ಯಾಕೇಜ್​ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

Rahul slams govt's stimulus measures
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ

By

Published : Jun 29, 2021, 2:17 PM IST

ನವದೆಹಲಿ:ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಕೇಂದ್ರ ಸರ್ಕಾರ ಘೋಷಿಸಿದ ಪರಿಹಾರ ಕ್ರಮಗಳನ್ನು ಕಾಂಗ್ರೆಸ್​ ಟೀಕಿಸಿದೆ. ಪಕ್ಷದ​ ನಾಯಕ ರಾಹುಲ್ ಗಾಂಧಿ, ಯಾವುದೇ ಕುಟುಂಬವು ತನ್ನ ದೈನಂದಿನ ಅಗತ್ಯತೆಗಳಿಗಾಗಿ ಕೇಂದ್ರದ ಈ ಆರ್ಥಿಕ ಪ್ಯಾಕೇಜ್ ಅನ್ನು ಉಪಯೋಗಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ ಆರ್ಥಿಕ ಪ್ಯಾಕೇಜ್​ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ಯಾವುದೇ ಕುಟುಂಬವು ತಮ್ಮ ಜೀವನ-ಆಹಾರ-ಔಷಧಿ-ಮಗುವಿನ ಶಾಲಾ ಶುಲ್ಕಕ್ಕಾಗಿ ಈ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಇದು ಪ್ಯಾಕೇಜ್‌ ಅಲ್ಲ​" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಬಿಕ್ಕಟ್ಟಿಗೆ ಬಡ, ಕೆಳ ಹಾಗು ಮಧ್ಯಮ ವರ್ಗದವರ ಖಾತೆಗಳಿಗೆ ಹಣವನ್ನು ಹಾಕುವುದೇ ಪರಿಹಾರ. ಉದ್ಯೋಗಗಳನ್ನು ಕಳೆದುಕೊಂಡಿರುವ ಮತ್ತು ಆದಾಯ ಅಥವಾ ವೇತನವನ್ನು ಕಡಿಮೆಗೊಳಿಸಿದ ಆರ್ಥಿಕತೆಯಲ್ಲಿ ಬೇಡಿಕೆ ಬೆಳೆಯುವುದಿಲ್ಲ. ಹಾಗಾಗಿ, ಜನರ ಕೈಯಲ್ಲಿ ಹಣವನ್ನು ನೀಡುವುದೇ ಪರಿಹಾರ" ಎಂದು ಪುನರುಚ್ಚರಿಸಿದ್ದಾರೆ.

ABOUT THE AUTHOR

...view details