ನವದೆಹಲಿ:ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 'ಕಾಂಗ್ರೆಸ್ ಬಡ ಮತ್ತು ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತದೆ. ಇದು ನಮ್ಮ ಆರ್ಥಿಕ ನೀತಿಯ ತಿರುಳು' ಎಂದು ಅವರು ತಿಳಿಸಿದ್ದಾರೆ.
ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಶನಿವಾರ ಪ್ರತಿ ಸಿಲಿಂಡರ್‌ಗೆ ₹50 ಹೆಚ್ಚಿಸಲಾಗಿದೆ. ಇದು ಕೇವಲ ಆರು ವಾರಗಳಲ್ಲಿ ಎರಡನೇ ಹೆಚ್ಚಳ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿರಹಿತ ಎಲ್‌ಪಿಜಿ ಈಗ ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್‌ಗೆ ₹999.50 ದರ ಹೊಂದಿದೆ. ಈ ಹಿಂದೆ ₹949.50 ರೂ. ಇತ್ತು.