ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ ಮತ್ತು ಸಿಬ್ಬಂದಿ ಆಯ್ಕೆ ಆಯೋಗದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಮುಖರ್ಜಿ ನಗರ ಪ್ರದೇಶದಲ್ಲಿ ಭೇಟಿಯಾಗಿ ಸಂವಾದ ನಡೆಸಿದ್ದಾರೆ. ರಾಹುಲ್ ಗಾಂಧಿಯವರ, "ಮೋದಿ ಉಪನಾಮೆ" ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿದ ದಿನದಂದು ವಿದ್ಯಾರ್ಥಿಗಳೊಂದಿಗೆ ಗಾಂಧಿ ಸಭೆ ನಡೆಯಿತು. ರಾಹುಲ್ಗಾಂಧಿ ವಿದ್ಯಾರ್ಥಿಗಳೊಂದಿಗೆ ರಸ್ತೆಬದಿಯಲ್ಲಿ ಕುರ್ಚಿ ಮೇಲೆ ಕುಳಿತು ಅವರ ನಿರೀಕ್ಷೆಗಳು ಮತ್ತು ಅನುಭವಗಳ ಬಗ್ಗೆ ಕೇಳಿದರು.
ಸೋಮವಾರ ಮುಂಜಾನೆ ರಾಹುಲ್ ಗಾಂಧಿ ಹಳೆಯ ದೆಹಲಿಯ ಮಟಿಯಾ ಮಹಲ್ ಮಾರುಕಟ್ಟೆ ಮತ್ತು ಬಂಗಾಳಿ ಮಾರುಕಟ್ಟೆಗೆ ಭೇಟಿ ನೀಡಿದರು. ಈ ಪ್ರದೇಶಗಳ ಜನಪ್ರಿಯ ಭಕ್ಷ್ಯಗಳನ್ನು ಸ್ವತಃ ಸೇವಿಸಿದರು. ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಎರಡು ದಿನಗಳ ನಂತರ ರಾಷ್ಟ್ರ ರಾಜಧಾನಿಗೆ ಹಿಂದಿರುಗಿದ ಕಾಂಗ್ರೆಸ್ ನಾಯಕ, ರಂಜಾನ್ ತಿಂಗಳಲ್ಲಿ ಚಟುವಟಿಕೆಯಿಂದ ತುಂಬಿರುವ ಹಳೆಯ ದೆಹಲಿಯ ಚಾಂದಿನಿ ಚೌಕ್‌ಗೆ ಭೇಟಿ ನೀಡಿದರು.
ರಾಹುಲ್, ಮಟಿಯಾ ಮಹಲ್ ಪ್ರದೇಶದಲ್ಲಿನ ಪ್ರಸಿದ್ಧ "ಶರಬತ್" ಮಾರಾಟಗಾರರನ್ನು ಭೇಟಿಯಾದರು. ಈ ವೇಳೆ ಪ್ರಸಿದ್ಧ ತಿನಿಸುಗಳನ್ನು ಸವಿದರು. ಬಂಗಾಳಿ ಮಾರುಕಟ್ಟೆಯಲ್ಲಿ ನಾಥು ಸಿಹಿತಿಂಡಿಗಳಲ್ಲಿ "ಗೋಲ್ಗಪ್ಪಸ್" ರುಚಿ ಸೇವಿಸಿದರು. ಹಳೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕನ ಸುತ್ತ ದೊಡ್ಡ ಜನಸಮೂಹ ಜಮಾಯಿಸಿತ್ತು. ಜನರು ಕಿರಿದಾದ ರಸ್ತೆಗಳಲ್ಲಿ ಅವರನ್ನು ಹಿಂಬಾಲಿಸಿದರು. ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಮಾನಹಾನಿ ಕೇಸ್: ಶಿಕ್ಷೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ