ಕಲ್ಪೆಟ್ಟ (ಕೇರಳ): ಕೋಯಿಕ್ಕೋಡ್ ವಿಮಾನ ದುರಂತದಲ್ಲಿ ಬದುಕುಳಿದವರನ್ನು ಕಾಂಗ್ರೆಸ್ ಮುಖಂಡ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಸೋಮವಾರ ಭೇಟಿಯಾದರು.
ಕೆನಿಚಿರಾದ ಇನ್ಫ್ಯಾಂಟ್ ಜೀಸಸ್ ಶಾಲೆಯಲ್ಲಿನ ಪೂತಾಡಿ ಗ್ರಾಮ ಪಂಚಾಯತ್ ಕುಡುಂಪಸ್ರೀ ಸಂಗಮ ಮತ್ತು ವಿದ್ಯಾ ವಾಹಿನಿ ಬಸ್ ವಿತರಣೆಯನ್ನು ಉದ್ಘಾಟಿಸಲು ಕಾಂಗ್ರೆಸ್ ಮುಖಂಡ ವಯನಾಡು ಜಿಲ್ಲೆಗೆ ಹೋಗಿದ್ದರು.
ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಬಹುತೇಕ ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಭಾರತೀಯರಿಗೆ ಇದೊಂದೆ ಏಕೈಕ ವ್ಯವಹಾರವಾಗಿದೆ. ಪ್ರತಿಯೊಂದು ವ್ಯವಹಾರವೂ ಯಾರೋ ಅಥವಾ ಇನ್ನೊಬ್ಬರಿಗೆ ಸೇರಿದೆ. ಕೆಲವು ವ್ಯಕ್ತಿಗಳು ಈ ವ್ಯವಹಾರವನ್ನು ಹೊಂದಲು ಬಯಸುತ್ತಿದ್ದಾರೆ. ಈ ಮೂರು ಕೃಷಿ ಕಾನೂನುಗಳು 2-3 ವ್ಯಕ್ತಿಗಳು ಭಾರತೀಯ ಕೃಷಿಯನ್ನು ಹೊಂದಲು ಮತ್ತು ನಿಯಂತ್ರಿಸಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.