ನಹರ್ಕಟಿ(ಅಸ್ಸೋಂ):ರಾಹುಲ್ ಗಾಂಧಿ ಮಹಾತ್ಮಾ ಗಾಂಧಿಯವರ ಹಾದಿಯಲ್ಲಿ ನಡೆಯುವ ಬದಲು ಜಿನ್ನಾ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆ ಮಾರ್ಗವನ್ನು ಅಸ್ಸೋಂ ಅಥವಾ ಭಾರತದ ಜನರು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಸಿಎಂ ಹಾಗೂ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ರಾಹುಲ್ ಮಹಾತ್ಮನ ಹಾದಿ ಬಿಟ್ಟು, ಜಿನ್ನಾ ಮಾರ್ಗದಲ್ಲಿ ನಡೆಯುತ್ತಿದ್ದಾರೆ: ಶಿವರಾಜ್ ಸಿಂಗ್ ಚೌಹಾಣ್ - ರಾಹುಲ್ ವಿರುದ್ಧ ಶಿವರಾಜ್ ಸಿಂಗ್ ವಾಗ್ದಾಳಿ
ಅಸ್ಸೋಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಿದರು.

Shivraj Singh Chouhan
ಅಸ್ಸೋಂನ ನಹರ್ಕಟಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಬದ್ರುದ್ದೀನ್ ಅಜ್ಮಲ್ನಂತಹ ವ್ಯಕ್ತಿಯೊಂದಿಗೆ ಸೇರಿಕೊಂಡಿದ್ದು, ಒಳನುಸುಳುಕೋರರನ್ನು ಬೆಂಬಲಿಸಿದ್ದಾರೆಂದು ಆರೋಪಿಸಿದರು.
ರಾಹುಲ್ ವಿರುದ್ಧ ಶಿವರಾಜ್ ಸಿಂಗ್ ವಾಗ್ದಾಳಿ
ಕಾಂಗ್ರೆಸ್ ಅಸ್ಸೋಂಗೆ ಹಸಿವು, ನಿರುದ್ಯೋಗ ಮತ್ತು ಬಡತನ ನೀಡಿದ್ದು, ಅದರ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿಯಾಗಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಬಾನಂದ್ ಸೋನವಾಲ್ ನೇತೃತ್ವದಲ್ಲಿ ಅಸ್ಸೋಂ ಅಭಿವೃದ್ಧಿಯ ಹಾದಿಯತ್ತ ಮುನ್ನಡೆಯಲು ಪ್ರಾರಂಭಿಸಿತು ಎಂದಿದ್ದಾರೆ.