ಕರ್ನಾಟಕ

karnataka

ETV Bharat / bharat

Rahul Gandhi: 'ಇಡೀ ಭಾರತವೇ ನನ್ನ ಮನೆ...': ಸಂಸದರಾಗಿ ಮರಳಿ ಸರ್ಕಾರಿ ಬಂಗಲೆ ಪಡೆದ ರಾಹುಲ್​ ಗಾಂಧಿ ಪ್ರತಿಕ್ರಿಯೆ - ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

Rahul Gandhi: ಲೋಕಸಭಾ ಸದಸ್ಯತ್ವ ಸ್ಥಾನವನ್ನು ಮರಳಿ ಪಡೆದಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಇಂದು ಸರ್ಕಾರಿ ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ.

rahul-gandhi-gets-his-bungalow-back-says-mera-ghar-poora-hindustan
"ಇಡೀ ಭಾರತವೇ ನನ್ನ ಮನೆ".. ಸರ್ಕಾರಿ ಬಂಗಲೆ ಮರುಹಂಚಿಕೆ ರಾಹುಲ್​ ಪ್ರತಿಕ್ರಿಯೆ

By

Published : Aug 8, 2023, 9:38 PM IST

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನದ ಮೇಲಿನ ಅನರ್ಹತೆ ವಾಪಸ್​ ಪಡೆದ ಬೆನ್ನಲ್ಲೇ ನವದೆಹಲಿಯಲ್ಲಿ ಅವರಿಗೆ ನೀಡಲಾಗಿದ್ದ ಅಧಿಕೃತ ನಿವಾಸಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ 12, ತುಘಲಕ್ ಲೇನ್‌ನಲ್ಲಿರುವ ರಾಹುಲ್ ಅವರ ಅಧಿಕೃತ ನಿವಾಸವನ್ನು ಮಂಗಳವಾರ ಮರು ಹಂಚಿಕೆ ಮಾಡಲಾಯಿತು. ಈ ನಿವಾಸ ಪಡೆಯುವ ಬಗ್ಗೆ ಅವರಿಗೆ 8 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್, "ಇಡೀ ಭಾರತವೇ ನನ್ನ ಮನೆ" ಎಂದರು.

ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್​ ದೋಷಿಯೆಂದು ಮಾರ್ಚ್​ 23ರಂದು ಗುಜರಾತ್​ನ ಸೂರತ್ ಕೋರ್ಟ್​ ತೀರ್ಪು ನೀಡಿ, 2 ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಿತ್ತು. ಇದರ ನಂತರ ಅವರ ಸಂಸತ್​ ಸ್ಥಾನ ರದ್ದಾಗಿತ್ತು. ಬಳಿಕ ತಮಗೆ ಒದಗಿಸಲಾಗಿದ್ದ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22ರೊಳಗೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಅಂತೆಯೇ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡಿದ್ದರು. ತಾಯಿ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸಕ್ಕೆ ಸ್ಥಳಾಂತರಗೊಂಡಿದ್ದರು.

ಇದರ ನಡುವೆ ದೆಹಲಿಯ ಮಾಜಿ ಸಿಎಂ ದಿ.ಶೀಲಾ ದೀಕ್ಷಿತ್ ಅವರ ದಕ್ಷಿಣ ದೆಹಲಿಯ ಪೂರ್ವ ನಿಜಾಮುದ್ದೀನ್​ ಪ್ರದೇಶದ ನಿವಾಸಕ್ಕೆ ಸ್ಥಳಾಂತರಗೊಳ್ಳುವ ಯೋಚನೆಯಲ್ಲಿದ್ದರು. ಇದೀಗ ಸುಪ್ರೀಂ ಕೋರ್ಟ್, ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ. ಇದರ ಪರಿಣಾಮ ಲೋಕಸಭೆ ಸದಸ್ಯತ್ವ ಅನರ್ಹತೆ ರದ್ದುಗೊಳಿಸಿ ಲೋಕಸಭೆ ಕಾರ್ಯದರ್ಶಿ ಆದೇಶ ಹೊರಡಿದ್ದಾರೆ. ಇದಾದ ಮರುದಿನವೇ ಅವರಿಗೆ ಹಳೆ ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ.

ರಾಹುಲ್‌ ವಿರುದ್ಧ ಮಾನನಷ್ಟ ಪ್ರಕರಣ: 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುವಾಗ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. "ಮೋದಿ ಉಪನಾಮ ಹೊಂದಿದ ಎಲ್ಲರೂ ಏಕೆ ಕಳ್ಳರಾಗ್ತಾರೆ" ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಗುಜರಾತ್​ ಬಿಜೆಪಿ ಶಾಸಕ, ಮಾಜಿ ಸಚಿವ ಪೂರ್ಣೇಶ್ ಮೋದಿ, ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸೂರತ್​ ನ್ಯಾಯಾಲಯ 2023ರ ಮಾರ್ಚ್​ 24ರಂದು ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಇದರ ಜೊತೆಗೆ ಕೇರಳದ ವಯನಾಡು ಕ್ಷೇತ್ರ ಪ್ರತಿನಿಧಿಸುತ್ತಿದ್ದ ರಾಹುಲ್ ಗಾಂಧಿ ಅವರ ಸಂಸತ್​ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಸೂರತ್​ ನ್ಯಾಯಾಲಯವು ತೀರ್ಪು ಪ್ರಶ್ನಿಸಿ ರಾಹುಲ್​ ಗಾಂಧಿ ಗುಜರಾತ್​ ಹೈಕೋರ್ಟ್​ ಮೊರೆ ಹೋಗಿದ್ದರು. ಹೈಕೋರ್ಟ್​ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಹೈಕೋರ್ಟ್​ ಆದೇಶ ಪ್ರಶ್ನಿಸಿ ರಾಹುಲ್​ ಮತ್ತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :Modi Surname case: ಸತ್ಯಕ್ಕೆ ಯಾವತ್ತಿದ್ರೂ ಜಯ- ರಾಹುಲ್​ ಗಾಂಧಿ; 'ಇಂಡಿಯಾ' ಮೈತ್ರಿ ಸಂಕಲ್ಪಕ್ಕೆ ಬಲ- ಮಮತಾ

ABOUT THE AUTHOR

...view details