ಕರ್ನಾಟಕ

karnataka

ETV Bharat / bharat

ಭಾರತ್​ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪುಟ್ಟ ಬಾಲಕಿ: ಚಪ್ಪಲಿ ಧರಿಸಲು ನೆರವಾದ ರಾಹುಲ್​

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿಯ ಚಪ್ಪಲಿಯನ್ನು ಸರಿಪಡಿಸುವ ಮೂಲಕ ರಾಹುಲ್ ಗಾಂಧಿ ಸರಳತೆ ಮೆರೆದಿದ್ದಾರೆ.

rahul-gandhi-fixes-young-girls-sandals-as-she-marches-along
ಭಾರತ್​ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪುಟ್ಟ ಬಾಲಕಿ: ಚಪ್ಪಲಿ ಧರಿಸಲು ನೆರವಾದ ರಾಹುಲ್​

By

Published : Sep 18, 2022, 10:14 PM IST

ಅಲಪ್ಪುಳ (ಕೇರಳ):ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ತಮಿಳುನಾಡಿನಿಂದ ಕೇರಳಕ್ಕೆ ಪ್ರವೇಶಿಸಿದ್ದು, ಮಾರ್ಗದುದ್ದಕ್ಕೂ ಸಾಕಷ್ಟು ಜನರು ಯಾತ್ರೆಗೆ ಸಾಥ್​ ನೀಡುತ್ತಿದ್ದಾರೆ. ಭಾರತ್​ ಜೋಡೆ ಯಾತ್ರೆಯಲ್ಲಿ ವೃದ್ಧರಿಂದ ಹಿಡಿದು ಮಕ್ಕಳ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಇದರ ನಡುವೆ ತಮ್ಮೊಂದಿಗೆ ಯಾತ್ರೆಯಲ್ಲಿ ನಡೆದುಕೊಂಡು ಬಂದ ಪುಟ್ಟ ಬಾಲಕಿಯೊಬ್ಬಳಿಗೆ ಚಪ್ಪಲಿ ಧರಿಸಲು ರಾಹುಲ್​ ನೆರವಾಗಿರುವ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ.

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾನುವಾರ 11ನೇ ದಿನದ ಭಾರತ್​ ಜೋಡೋ ಯಾತ್ರೆ ನಡೆಯಿತು. ಈ ವೇಳೆ ತನ್ನ ತಂದೆಯೊಂದಿಗೆ ಯಾತ್ರೆಯಲ್ಲಿ ಪುಟ್ಟು ಬಾಲಕಿ ಪಾಲ್ಗೊಂಡು ರಾಹುಲ್​ ಗಾಂಧಿ ಒಟ್ಟಿಗೆ ನಡೆದುಕೊಂಡು ಬರುತ್ತಿದ್ದರು. ಆದರೆ, ಆಗ ಬಾಲಕಿಯ ಚಪ್ಪಲಿ ಸಡಿಲಿಕೆಯಾಗಿ ನಡೆಯಲು ತೊಂದರೆ ಅನುಭವಿಸುತ್ತಿದ್ದಳು. ಇದನ್ನು ಗಮನಿಸಿದ ರಾಹುಲ್ ತಕ್ಷಣವೇ ತಾವೇ ಬಾಗಿ ಬಾಲಕಿಯ ಚಪ್ಪಲಿಯನ್ನು ಸರಿಪಡಿಸಿದ್ದಾರೆ.

ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ತಮ್ಮ ಮಗಳು ಬೆಳಗ್ಗೆ 4 ಗಂಟೆಗೆ ಎದ್ದಿದ್ದಾಳೆ ಎಂದು ಬಾಲಕಿಯ ತಂದೆ ಹೇಳುತ್ತಿರುವುದೂ ಸಹ ದಾಖಲಾಗಿದೆ. ಜೊತೆಗೆ ಅವರು (ರಾಹುಲ್​) ತುಂಬಾ ಸರಳ ವ್ಯಕ್ತಿ. ವಿಐಪಿಯಂತೆ ಏನೂ ಇಲ್ಲ. ಭಾರತಕ್ಕೆ ಅಂತಹ ನಾಯಕನ ಅಗತ್ಯವಿದೆ ಎಂದು ತನ್ನ ಮಗಳನ್ನು ಎತ್ತಿಕೊಂಡ ಆ ವ್ಯಕ್ತಿ ಹೇಳಿದ್ದಾರೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಾಗೂ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಅನೇಕ ಕಾಂಗ್ರೆಸ್​ ನಾಯಕರು ರಾಹುಲ್​ ಬಾಲಕಿಯ ಚಪ್ಪಲಿಯನ್ನು ಸರಿಪಡಿಸುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಅನೇಕ ಜನರು ರಾಹುಲ್​ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್​

ABOUT THE AUTHOR

...view details