ನವದೆಹಲಿ: ಏಪ್ರಿಲ್ 2 ರಂದು ಹಾರ್ವರ್ಡ್ ಕೆನಡಿ ಶಾಲೆ ರಾಯಭಾರಿ ನಿಕೋಲಸ್ ಬರ್ನ್ಸ್ ಅವರೊಂದಿಗೆ ನಡೆದ ನೇರ ಸಂವಾದದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಪಕ್ಷ ದೇಶದಲ್ಲಿ ಚುನಾವಣೆಯಲ್ಲಿ ಯಾಕೆ ಗೆಲ್ಲುತ್ತಿಲ್ಲ ಎನ್ನುತ್ತಿಲ್ಲ ಎನ್ನುವ ಕುರಿತು ವಿವರಿಸಿದರು.
'ಕಾಂಗ್ರೆಸ್ ಚುನಾವಣೆಯಲ್ಲಿ ಏಕೆ ಗೆಲ್ಲುತ್ತಿಲ್ಲ': ರಾಹುಲ್ ಗಾಂಧಿ ಹೇಳಿದ್ದೇನು? - why Congress is not winning elections
ದೇಶದ ಸಾಂಸ್ಥಿಕ ಚೌಕಟ್ಟನ್ನು ಬಿಜೆಪಿ ಸೆರೆಹಿಡಿಯಲು ಯತ್ನಿಸುತ್ತಿದೆ. ಬಿಜೆಪಿಗೆ ಸಂಪೂರ್ಣವಾಗಿ ಆರ್ಥಿಕ ಮತ್ತು ಮಾಧ್ಯಮ ಪ್ರಾಬಲ್ಯವಿದೆ. ಹೀಗಾಗಿ ಅಸ್ಸೋಂನಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಕಾರುಗಳಲ್ಲಿ ಮತದಾನ ಯಂತ್ರಗಳ ಸುತ್ತ ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು.
ಅಸ್ಸೋಂನಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಕಾರುಗಳಲ್ಲಿ ಮತದಾನ ಯಂತ್ರಗಳ ಸುತ್ತ ಓಡಾಡುತ್ತಿರುವ ವಿಡಿಯೋಗಳನ್ನು ವ್ಯಕ್ತಿಯೊಬ್ಬರು ಕಳುಹಿಸಿದ್ದಾರೆ. ಆದರೆ, ಈ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಯಾವುದೇ ಸುದ್ದಿ ಪ್ರಸಾರವಾಗಿಲ್ಲ ಎಂದು ಆರೋಪಿಸಿದರು.
ಇನ್ನು ದೇಶದ ಸಾಂಸ್ಥಿಕ ಚೌಕಟ್ಟನ್ನು ಬಿಜೆಪಿ ಸೆರೆ ಹಿಡಿಯಲು ಯತ್ನಿಸುತ್ತಿದೆ. ಬಿಜೆಪಿಗೆ ಸಂಪೂರ್ಣವಾಗಿ ಆರ್ಥಿಕ ಮತ್ತು ಮಾಧ್ಯಮ ಪ್ರಾಬಲ್ಯವಿದೆ. ಹೀಗಾಗಿ ಕೇವಲ ಕಾಂಗ್ರೆಸ್ ಮಾತ್ರವಲ್ಲದೇ, ಬಿಎಸ್ಪಿ, ಎಸ್ಪಿ, ಎನ್‌ಸಿಪಿ ಸಹ ಚುನಾವಣೆಯಲ್ಲಿ ಗೆಲ್ಲುತ್ತಿಲ್ಲ. ಚುನಾವಣೆಗಳ ವಿರುದ್ಧ ಹೋರಾಡಲು ನನಗೆ ಸಾಂಸ್ಥಿಕ ರಚನೆ ಮತ್ತು ನನ್ನನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ಬೇಕು. ಜೊತೆಗೆ ಸಮಂಜಸವಾದ ಮುಕ್ತ ಮಾಧ್ಯಮದ ಅವಶ್ಯಕತೆ ಇದೆ. ಆರ್ಥಿಕತೆಯಲ್ಲಿ ಸಮಾನತೆ ಇರಬೇಕು. ಆಗ ಮಾತ್ರ ಗೆಲುವು ಸಾಧ್ಯ ಎಂದರು.