ನವದೆಹಲಿ:ಎಲ್ಲ ನಾಗರಿಕರಿಗೆ ಕೋವಿಡ್ ಲಸಿಕೆಗ ಉಚಿತವಾಗಿ ಸಿಗಬೇಕು ಮತ್ತು ದೇವು "ಬಿಜೆಪಿಯ ವ್ಯವಸ್ಥೆಗೆ ಬಲಿಯಾಗಬಾರದು" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಭಾರತದ ವ್ಯಾಕ್ಸಿನೇಷನ್ ಅಭಿಯಾನವು ಮೇ 1ರಿಂದ ಪ್ರಮುಖ ಉತ್ತೇಜನ ಪಡೆಯಲು ಸಜ್ಜಾಗಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆಗೆ ಅರ್ಹರಾಗಿರುತ್ತಾರೆ.
"ಚರ್ಚೆ ಸಾಕು. ದೇಶದ ಎಲ್ಲ ನಾಗರಿಕರು ಉಚಿತವಾಗಿ ಲಸಿಕೆ ಪಡೆಯಬೇಕು. ಭಾರತ ಬಿಜೆಪಿಯ ವ್ಯವಸ್ಥೆಗೆ ಬಲಿಯಾಗಬಾರದು" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಕೇಳುತ್ತಿದೆ. ಸರ್ಕಾರದ ವ್ಯಾಕ್ಸಿನೇಷನ್ ನೀತಿ ಮತ್ತು ದೇಶದ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವುದರ ಬಗ್ಗೆ ಪಕ್ಷವು ಟೀಕಿಸಿದೆ.