ಹೈದರಾಬಾದ್(ತೆಲಂಗಾಣ): ಕೇರಳದಿಂದ ಪ್ರಾರಂಭವಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯಕ್ಕೆ ತೆಲಂಗಾಣ ರಾಜ್ಯದಲ್ಲಿ ಸಾಗುತ್ತಿದೆ. ಈ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಜನಸಾಮನ್ಯರೊಂದಿಗೆ ಬೆರೆತು, ಕಾಲ ಕಳೆಯುತ್ತ ರಾಹುಲ್ ಹೆಜ್ಜೆ ಹಾಕುತ್ತಿದ್ದಾರೆ.
ಗುರುವಾರ ಭಾರತ್ ಜೋಡೋ ಯಾತ್ರೆಯ ಸುಂದರ ಕ್ಷಣವೊಂದನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಎದುರು ಬಾಲಕನೊಬ್ಬ ಕರಾಟೆ ಪ್ರದರ್ಶಿಸುವಾಗ ವಿದ್ಯಾರ್ಥಿಯ ಕರಾಟೆ ಪಟ್ಟುಗಳನ್ನು ರಾಹುಲ್ ಸರಿಪಡಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ: ಮಕ್ಕಳೊಂದಿಗೆ ರಾಹುಲ್ ಗಾಂಧಿ ರನ್ನಿಂಗ್ ರೇಸ್