ಕರ್ನಾಟಕ

karnataka

ETV Bharat / bharat

ರಾಹುಲ್​ ಗಾಂಧಿ ಮುಂದಿನ ಪ್ರಧಾನಿ.. ಇದು ಈ ಅಭಿಮಾನಿಯ ಮಹದಾಸೆ! - ರಾಜಸ್ತಾನದಲ್ಲಿ ಕಾಂಗ್ರೆಸ್​ ಚಿಂತನಾ ಶಿಬಿರ

ರಾಹುಲ್​ ಗಾಂಧಿಯ ಅಪ್ಪಟ ಅಭಿಮಾನಿ ಹರಿಯಾಣದ ದಿನೇಶ್​ ಶರ್ಮಾ ಅವರು ರಾಜಸ್ಥಾನದ ಉದಯ್​ಪುರದಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರದಲ್ಲಿ ಕಾಂಗ್ರೆಸ್ ಬಾವುಟ ಹಿಡಿದುಕೊಂಡು ರಾಹುಲ್​ ಗಾಂಧಿ ಪರ ಪ್ರಚಾರ ಮಾಡುತ್ತಿದ್ದಾರೆ. ರಾಹುಲ್​ ಮತ್ತೆ ಪಕ್ಷ​ದ ಅಧ್ಯಕ್ಷರಾಗಬೇಕು ಎಂದಿದ್ದಾರೆ.

rahul-gandhi-big-fan
ಅಭಿಮಾನಿ ದಿನೇಶ್​ ಶರ್ಮಾ

By

Published : May 14, 2022, 5:19 PM IST

ಉದಯಪುರ (ರಾಜಸ್ಥಾನ):ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಕಟ್ಟಾಭಿಮಾನಿಯಾದ ಹರಿಯಾಣದ ದಿನೇಶ್​ ಶರ್ಮಾ, ರಾಹುಲ್​ ಅವರು ಮತ್ತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ರಾಹುಲ್​ ಅವರೇ ಮುಂದಿನ ಪ್ರಧಾನಿ ಎಂದು ಹೇಳಿದ್ದಾರೆ.

ರಾಜಸ್ತಾನದ ಉದಯ್​ಪುರದಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರದಲ್ಲಿ ಭಾಗಿಯಾಗಿರುವ ದಿನೇಶ್​ ಶರ್ಮಾ, ಕಾರ್ಯಕ್ರಮದ ಹೊರಭಾಗದಲ್ಲಿ ಕೈಯಲ್ಲಿ ಪಕ್ಷದ ಬಾವುಟ ಹಿಡಿದುಕೊಂಡು ಘೊಷಣೆ ಕೂಗುತ್ತಾ, ಬರಿಗಾಲಿನಲ್ಲಿ ಓಡಾಡುತ್ತಿದ್ದರು. ಸೋನಿಯಾ, ಇಂದಿರಾ ಗಾಂಧಿ ಅವರ ಭಾವಚಿತ್ರವುಳ್ಳ ಅಂಗಿಯನ್ನು ತೊಟ್ಟ ದಿನೇಶ್​ ಪೇಟ ತೊಟ್ಟು, ಪಕ್ಷದ ಬಾವುಟ ಹಾರಿಸುತ್ತಿರುವುದು ಹೊರಗಡೆ ಕಂಡು ಬಂತು.

ರಾಹುಲ್​ ಗಾಂಧಿ ಅಭಿಮಾನಿ ದಿನೇಶ್​ ಶರ್ಮಾ

ಈಟಿವಿ ಭಾರತ್​ ಇವರನ್ನು ಸಂಪರ್ಕಿಸಿದಾಗ, ತಾನು ರಾಹುಲ್ ಗಾಂಧಿಯ ಅಪ್ಪಟ ಅಭಿಮಾನಿ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ರಾಹುಲ್ ಗಾಂಧಿ ಹಲವಾರು ಚುನಾವಣೆಗಳನ್ನು ಎದುರಿಸಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಎಲ್ಲಿಗೇ ಭೇಟಿ ನೀಡಿದರೂ, ಕಾರ್ಯಕ್ರಮಗಳು ನಡೆಸಿದರೂ ಅಲ್ಲಿ ನಾನು ಹಾಜರಾಗುತ್ತೇನೆ. ಇದನ್ನು ನಾನು ಕಳೆದ 12 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. ಅವರ ಪರ ಪ್ರಚಾರ ಮಾಡುತ್ತಲೇ ಇರುತ್ತೇನೆ ಎಂದು ದಿನೇಶ್ ​ಶರ್ಮಾ ಹೇಳಿದರು.

ಓದಿ:ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತಿದ್ದ ಸುನಿಲ್ ಜಾಖರ್‌ ಕಾಂಗ್ರೆಸ್‌ಗೆ 'ಗುಡ್‌ಬೈ-ಗುಡ್‌ಲಕ್' ಎಂದು ಟ್ವೀಟ್‌..

ABOUT THE AUTHOR

...view details