ಬುಂಡಿ(ರಾಜಸ್ಥಾನ):ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಶನಿವಾರ ಬುಂಡಿ ಜಿಲ್ಲೆಯಿಂದ ಪುನಾರಂಭಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ವಿರಾಮದ ನಂತರ ಶುಕ್ರವಾರ ಪುನಾರಂಭಗೊಂಡಿದೆ.
ಇಂದು ರಾಜಸ್ಥಾನದಲ್ಲಿ ಆರನೇ ದಿನವಾದ ಭಾರತ್ ಜೋಡೋ ಯಾತ್ರೆಯು ಬುಂಡಿ ಜಿಲ್ಲೆಯ ಕೇಶೋರಾಯಪಟ್ಟಣದಿಂದ ಪ್ರಾರಂಭವಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ, ಕ್ರೀಡಾ ಸಚಿವ ಅಶೋಕ್ ಚಂದ್ನಾ, ಸಚಿವ ರಮೇಶ್ ಮೀನಾ, ಶಾಸಕ ಕೃಷ್ಣ ಪೂನಿಯಾರ ಜೊತೆಗೆ ಹಲವು ಶಾಸಕರು ಮತ್ತು ಸಚಿವರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯು ಬೆಳಗ್ಗೆ 8:30 ಕ್ಕೆ ರಿಲಯನ್ಸ್ ಪೆಟ್ರೋಲ್ ಪಂಪ್, ರಂಗಪುರಿಯಾ, ಕೇಶವರಾಯಪಟ್ಟಣ, ಲಾಲ್ಸೋಟ-ಕೋಟಾ ಹೆದ್ದಾರಿಯಿಂದ ಅರ್ನೆತಾ ಗ್ರಾಮವನ್ನು ತಲುಪಿ ವಿಶ್ರಾಂತಿ ಪಡೆದಿದೆ. ನಂತರ ಮಧ್ಯಾಹ್ನ 3:30 ಕ್ಕೆ ಪ್ರಯಾಣದ ಎರಡನೇ ಹಂತವು ಪ್ರಾರಂಭಗೊಂಡು ಬಾಲಾಪುರ್ ಛೇದಕ ಕಪ್ರೆನ್ನ್ನು ತಲುಪಲಿದ್ದು ಪ್ರಯಾಣದ ಅಂತಿಮ ಹಂತವನ್ನು ಬಾಲಾಪುರ್ ಚೌರಾಹಾದಲ್ಲಿ ನಿಗದಿಸಲಾಗಿದೆ. ಜೊತೆಗೆ ಇಂದು ಭಾರತ್ ಜೋಡೋ ಯಾತ್ರೆಯಲ್ಲಿ ಸ್ವಚ್ಛತೆಯ ಯೋಧ ಸ್ವೀಪರ್ಸ್ ಕೂಡ ಸೇರಿಕೊಂಡಿದ್ದಾರೆ.
ರಾಜಸ್ಥಾನ ಸಮಗ್ರ ಸೇವಾ ಸಂಘದ ಅಧ್ಯಕ್ಷ ಸವಾಯಿ ಸಿಂಗ್ ಮಾತನಾಡಿ, ದೇಶದಲ್ಲಿ ಕೇಸರೀಕರಣದ ರಾಜಕಾರಣದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಂದು ಕ್ಷೇತ್ರವೂ ಖಾಸಗೀಕರಣದತ್ತ ಸಾಗುತ್ತಿದ್ದು, ಅದು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದರು.