ಕರ್ನಾಟಕ

karnataka

ETV Bharat / bharat

ರಫೇಲ್​ ಡೀಲ್.. 'ಮಾಡಿದ ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲಾಗಲ್ಲ'.. ಕೇಂದ್ರದ ವಿರುದ್ಧ ರಾಹುಲ್​ ಗಾಂಧಿ ಕಿಡಿ - Rafale jet deal

ಹಿಂದಿ ಮತ್ತು ಇಂಗ್ಲಿಷ್​​ನಲ್ಲಿ ಟ್ವೀಟ್ ಮಾಡಿ ರಫೇಲ್​ ಹಗರಣದ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಫೇಲ್ ಒಪ್ಪಂದದ ಬಗ್ಗೆ ಭಾರಿ ಪ್ರಚಾರ ನಡೆಸಿತ್ತು. ಮೋದಿ ಸರ್ಕಾರವನ್ನ ಇದೇ ವಿಷಯ ಇಟ್ಟುಕೊಂಡು ಇಕ್ಕಟ್ಟಿಗೆ ಸಿಲುಕಿಸಿತ್ತು..

rahul-gandhi
ರಾಹುಲ್​ ಗಾಂಧಿ

By

Published : Apr 6, 2021, 7:24 PM IST

ನವದೆಹಲಿ :ರಫೇಲ್​ ರಕ್ಷಣಾ ಒಪ್ಪಂದದ ಬಗ್ಗೆ ರಾಹುಲ್​​ ಗಾಂಧಿ ಮತ್ತೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಮಾತು ಹೀಗಿದೆ.. ’’ಅವರು ಮಾಡಿರುವ ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ವಿಮಾನ ತಯಾರಕ ಸಂಸ್ಥೆ ಡಸಾಲ್ಟ್​ನಿಂದ ಮಧ್ಯವರ್ತಿಗಳಿಗೆ 1.1 ಮಿಲಿಯನ್ ಯೂರೋ ಪಾವತಿ ಮಾಡಲಾಗಿದೆ ಎಂಬ ವಿಷಯವನ್ನ ಪ್ರೆಂಚ್​ ಮಾಧ್ಯಮವೊಂದು ವರದಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ರಫೇಲ್​ ವಿವಾದ ಮತ್ತೆ ಸದ್ದು ಮಾಡುತ್ತಿದೆ. ಪ್ರೆಂಚ್​ ಮಾಧ್ಯಮವೊಂದರ ಆರೋಪವನ್ನ ಕೇಂದ್ರ ಸರ್ಕಾರ ಮತ್ತೆ ಮತ್ತೆ ಅಲ್ಲಗಳೆದಿದೆ. ಈ ನಡುವೆ ಪ್ರತಿಪಕ್ಷ ರಾಹುಲ್​ ಗಾಂಧಿ ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಲೇ ಇದ್ದಾರೆ. ಇದಕ್ಕೆ ಇಂಬು ನೀಡುವಂತೆ ಫ್ರಾನ್ಸನ್​ ಮಾಧ್ಯಮ ಡಸಾಲ್ಟ್​ ಕಂಪನಿ ಮಧ್ಯವರ್ತಿಗಳಿಗೆ ಹಣ ಸಂದಾಯ ಮಾಡಿರುವುದಾಗಿ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ರಾಹುಲ್​​ ಗಾಂಧಿ ಅವರು ಮಾಡಿರುವ ಆರೋಪ ನಿಜ ಎಂದು ಕಾಂಗ್ರೆಸ್​ ಪ್ರತಿಪಾದಿಸಿದೆ. 'ಮಾಡಿದ ಕರ್ಮ ಅವರವರ ಖಾತೆಯಲ್ಲಿ ಬರೆದಿಡಲಾಗುತ್ತೆ. ಅದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ' ಎಂದು ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್​​ನಲ್ಲಿ ಟ್ವೀಟ್ ಮಾಡಿ ರಫೇಲ್​ ಹಗರಣದ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಫೇಲ್ ಒಪ್ಪಂದದ ಬಗ್ಗೆ ಭಾರಿ ಪ್ರಚಾರ ನಡೆಸಿತ್ತು. ಮೋದಿ ಸರ್ಕಾರವನ್ನ ಇದೇ ವಿಷಯ ಇಟ್ಟುಕೊಂಡು ಇಕ್ಕಟ್ಟಿಗೆ ಸಿಲುಕಿಸಿತ್ತು.

ಇದನ್ನೂ ಓದಿ:ಕಾಂಗ್ರೆಸ್​​-ಸಿಪಿಎಂ ಘರ್ಷಣೆ ನೋಡಿದ ವೃದ್ಧ ಕುಸಿದು ಬಿದ್ದು ಸಾವು

ABOUT THE AUTHOR

...view details