ಕರ್ನಾಟಕ

karnataka

ETV Bharat / bharat

ಬ್ಲ್ಯಾಕ್​ ಫಂಗಸ್ ​ವಿಚಾರವಾಗಿ ಮೋದಿಗೆ 3 ಪ್ರಶ್ನೆ ಕೇಳಿದ ರಾಹುಲ್ ಗಾಂಧಿ - ಕಪ್ಪು ಶಿಲೀಂಧ್ರ

ಬ್ಲ್ಯಾಕ್​ ಫಂಗಸ್​ಗೆ ​ಚಿಕಿತ್ಸೆ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಹುಲ್ ಗಾಂಧಿ

By

Published : Jun 1, 2021, 1:41 PM IST

ನವದೆಹಲಿ:ದೇಶದಲ್ಲಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್​ ಫಂಗಸ್​) ಅಥವಾ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

"ಬ್ಲ್ಯಾಕ್​ ಫಂಗಸ್ ಮಹಾಮಾರಿ ಬಗ್ಗೆ ಕೇಂದ್ರ ಸರ್ಕಾರ ಮೂರು ವಿಚಾರಗಳನ್ನು ಸ್ಪಷ್ಟಪಡಿಸಬೇಕು - 1.ಆಂಫೊಟೆರಿಸಿನ್ ಬಿ ಔಷಧಿ ಕೊರತೆಗೆ ಏನು ಮಾಡಲಾಗುತ್ತಿದೆ? 2.ಔಷಧಿಯನ್ನು ರೋಗಿಗಳಿಗೆ ನೀಡುವ ವಿಧಾನವೇನು? 3.ಚಿಕಿತ್ಸೆ ನೀಡುವ ಬದಲು ಜನರಿಗೆ ಏಕೆ ಮೋದಿ ಸರ್ಕಾರ ತೊಂದರೆಗೆ ಒಳಗಾಗುವಂತೆ ಮಾಡುತ್ತಿದೆ?" ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಮಾರಿಗೆ ಸಿಗದ ಔಷಧಿ.. ಚಿಕಿತ್ಸೆ ನೀಡಬೇಕಾದ ವೈದ್ಯರ ಅಸಹಾಯಕತೆ..

ಭೀಕರ ಪರಿಸ್ಥಿತಿಗೆ ಕಾರಣವಾಗಿರುವ ಕೋವಿಡ್ ಜೊತೆಗೆ ಭಾರತ ಈಗ ಬಣ್ಣ ಬಣ್ಣದ ಶಿಲೀಂಧ್ರ ಸೋಂಕಿಗೂ ಸಾಕ್ಷಿಯಾಗಿದೆ. ಕಪ್ಪು, ಬಿಳಿ, ಹಳದಿ, ಕ್ರೀಮ್​ ಬಣ್ಣದ ಫಂಗಸ್ ಪ್ರಕರಣಗಳು​​ ಈಗಾಗಲೇ ವರದಿಯಾಗಿದ್ದು, ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಈವರೆಗೆ 1,250 ಮಂದಿಗೆ ಬ್ಲ್ಯಾಕ್​ ಫಂಗಸ್​ ಅಂಟಿರುವುದು ವರದಿಯಾಗಿದ್ದು, ಇವರಲ್ಲಿ 39 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ 39 ಜನರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details