ಕರ್ನಾಟಕ

karnataka

ETV Bharat / bharat

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ, ನಮ್ಮ ಸಾವಿರಾರು ಯುವಕರು ಅಲ್ಲಿ ಸಿಕ್ಕಿಬಿದ್ದಿದ್ದಾರೆ - ರಾಹುಲ್ ಗಾಂಧಿ - rahul gandhi rally in up

ಇವರು ದೇಶದಾದ್ಯಂತ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ , ಹಿಂದೂ ಧರ್ಮ ಎಂದರೆ ಏನು ? , ಹಿಂದು ಧರ್ಮ ಎಂದರೆ ಸತ್ಯ, ಆದರೆ ಅವರು ಹಿಂದೂ ಧರ್ಮದ ಹೆಸರಿನಲ್ಲಿ ಮತಗಳಿಸುವುದಿಲ್ಲ, ಬದಲಾಗಿ ಸುಳ್ಳಿನ ಮೇಲೆ ಮತಗಳಿಸುವುದಾಗಿ ಉತ್ತರಪ್ರದೇಶದ ವಾರಾಣಸಿಯ ಪಿಂದ್ರಾ ದಲ್ಲಿ ನಡೆದ ರ‍್ಯಾಲಿಯಲ್ಲಿ ಬಿಜೆಪಿ ವಿರುಧ್ಧ ವಾಗ್ದಾಳಿ ನಡೆಸಿದ್ದಾರೆ.

rahul-gandhi-addressed-rally-in-pindra-varanasi
ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ, ನಮ್ಮ ಸಾವಿರಾರು ಯುವಕರು ಅಲ್ಲಿ ಸಿಕ್ಕಿಬಿದ್ದಿದ್ದಾರೆ -ರಾಹುಲ್ ಗಾಂಧಿ

By

Published : Mar 5, 2022, 8:18 AM IST

ಉತ್ತರಪ್ರದೇಶ: ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ, ನಮ್ಮ ಸಾವಿರಾರು ಯುವಕರು ಅಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಈ ಯುವಕರು ಸಹಾಯ ಕೇಳಿದಾಗ, ಬಿಜೆಪಿ ಸದಸ್ಯರು ಭಾರತದಲ್ಲಿ ಕಾಲೇಜಿಗೆ ಸೇರಲು ಸಾಧ್ಯವಾಗದೇ ಉಕ್ರೇನ್‌ಗೆ ತೆರಳಿದ್ದಾರೆ ಎಂದು ಹೇಳುತ್ತಾರೆ. ಅವರ ರಕ್ಷಣೆ ಕೇಂದ್ರ ಸರಕಾರದ ಜವಾಬ್ದಾರಿಯಲ್ಲವೇ? ಬಿಜೆಪಿ ಯಾವಾಗಲೂ ಈ ತರಹದ ಸಮಜಾಯಿಷಿ ನೀಡುವುದಾಗಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ವಾರಣಾಸಿಯ ಪಿಂದ್ರಾದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ನಾನು ಬೇಕಾದರೆ ಸಾಯುತ್ತೇನೆ, ಆದರೆ ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇನೆ ಎಂದು ಸುಳ್ಳು ಹೇಳುವುದಿಲ್ಲ. ಮೋದಿ ಜಿ ಹಿಂದೂ ಧರ್ಮವನ್ನು ರಕ್ಷಿಸುತ್ತೇನೆ ಎಂದು ಸುಳ್ಳು ಹೇಳುತ್ತಾರೆ, ಅವರು ಹಿಂದೂ ಧರ್ಮವನ್ನು ರಕ್ಷಿಸುವುದಿಲ್ಲ ಬದಲಾಗಿ ಸುಳ್ಳನ್ನು ರಕ್ಷಿಸುತ್ತಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅವರು ದೇಶದಾದ್ಯಂತ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ, ಹಿಂದೂ ಧರ್ಮ ಎಂದರೆ ಏನು ? ಹಿಂದೂ ಧರ್ಮ ಎಂದರೆ ಸತ್ಯ. ಅವರು ಹಿಂದೂ ಧರ್ಮದ ಹೆಸರಿನಲ್ಲಿ ಮತ ಗಳಿಸುತ್ತಿರುವುಲ್ಲ, ಬದಲಾಗಿ ಸುಳ್ಳಿನ ಆಧಾರದ ಮೇಲೆ ಮತ ಗಳಿಸುತ್ತಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನಂತರ ಮಾತನಾಡಿದ ಪ್ರಿಯಾಂಕ ಗಾಂಧಿ, ಈ ನಾಯಕರು ಕೆಲಸ ಮಾಡದೇ ಜಾತಿ, ಧರ್ಮದ ಆಧಾರದಲ್ಲಿ ಮತ ಗಳಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಅವರು ನಿಮ್ಮ ಸಮಸ್ಯೆಗಳನ್ನು ಬಿಟ್ಟು ಮತ್ತೆಲ್ಲ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.

ಓದಿ :ಯುದ್ಧಪೀಡಿತ ಉಕ್ರೇನ್​ನಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು ಎಷ್ಟು ಗೊತ್ತಾ?

ABOUT THE AUTHOR

...view details