ನವದೆಹಲಿ: ದೇಶದಲ್ಲಿ ಕೋವಿಡ್ ಸಾವುಗಳ ಹೆಚ್ಚಳ, ಜಿಡಿಪಿ ಕುಸಿತ ಮತ್ತು ವ್ಯಾಕ್ಸಿನ್ ಕೊರತೆಗೆ ಭಾರತ ಸರ್ಕಾರದ ಅಳುವ ಪ್ರಧಾನಿಯೇ ಪ್ರತಿಕ್ರಿಯೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯಮಿಶ್ರಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ 'ವ್ಯಾಕ್ಸಿನ್ ಇಲ್ಲ, ಜಿಡಿಪಿ ಇಳಿಕೆ, ಹೆಚ್ಚು ಕೋವಿಡ್ ಸಾವಿಗೆ ಭಾರತ ಸರ್ಕಾರ ಪ್ರತಿಕ್ರಿಯೆ ಅಳುವ ಪ್ರಧಾನಿಯಾಗಿದೆ' ಎಂದು ಮಾರ್ಮಿಕವಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಮುಗ್ದ ಮೊಸಳೆಗಳು' ಎಂದಷ್ಟೇ ಉಲ್ಲೇಖಿಸಿದ್ದು, ಪ್ರಧಾನಿ ಮೋದಿ ಅಳುವುದನ್ನು ವ್ಯಂಗ್ಯವಾಗಿ ಛೇಡಿಸಿದ್ದಾರೆ. ಪ್ರಧಾನಿ ಮೋದಿ ದೇಶದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವುಗಳಿಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.