ಕರ್ನಾಟಕ

karnataka

ETV Bharat / bharat

ಹೆಚ್ಚುತ್ತಿರುವ ಕೊರೊನಾ.. ಮೋದಿಗೆ ಬಣ್ಣದ ಕನ್ನಡಕವನ್ನು ತೆಗೆಯುವಂತೆ ಹೇಳಿದ ರಾಹುಲ್ ಗಾಂಧಿ

ಆಮ್ಲಜನಕ, ವೆಂಟಿಲೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆ ಮತ್ತು ಅವುಗಳನ್ನು ಪಡೆಯಲು ಜನರು ಪಡುತ್ತಿರುವ ಸಂಕಟದ ಬಗ್ಗೆ ಒಂದು ನಿಮಿಷದ ವಿಡಿಯೋವನ್ನು ಗಾಂಧಿ ಹಂಚಿಕೊಂಡಿದ್ದಾರೆ.

Rahul Gandhi and PM Modi
Rahul Gandhi and PM Modi

By

Published : May 11, 2021, 3:54 PM IST

Updated : May 11, 2021, 4:07 PM IST

ನವದೆಹಲಿ: ದೇಶದಲ್ಲಿ ಕೋವಿಡ್ ಆರ್ಭಟ ಹೆಚ್ಚಾಗುತ್ತಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ತಮ್ಮ ಗುಲಾಬಿ ಬಣ್ಣದ ಕನ್ನಡಕವನ್ನು ತೆಗೆಯಬೇಕು ಎಂದು ಹೇಳಿದ್ದಾರೆ.

ಹೊಸ ಸಂಸತ್ತಿನ ಕಟ್ಟಡ ಮತ್ತು ಪ್ರಧಾನಮಂತ್ರಿಗೆ ಹೊಸ ನಿವಾಸ ಸೇರಿದಂತೆ ಇತರ ಯೋಜನೆಯನ್ನು ಕೈಬಿಡಬೇಕು ಮತ್ತು ಹಣವನ್ನು ವೈದ್ಯಕೀಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಸುಧಾರಣೆಗೆ ಬಳಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದ್ದಾರೆ.

ನದಿಗಳಲ್ಲಿ ತೇಲಿ ಬರುತ್ತಿರುವ ಅಸಂಖ್ಯಾತ ಮೃತ ದೇಹಗಳು. ಆಸ್ಪತ್ರೆಗಳಲ್ಲಿ ಮೈಲಿಗಳಷ್ಟು ಸಾಲುಗಳು. ಜನರು ತಮ್ಮ ಜೀವಿಸುವ ಹಕ್ಕನ್ನು ಕಸಿದುಕೊಂಡಿದ್ದಾರೆ. ಪಿಎಂ ಗುಲಾಬಿ ಬಣ್ಣದ ಕನ್ನಡಕವನ್ನು ತೆಗೆದು ಹಾಕಬೇಕು. ಅದರ ಮೂಲಕ ಸೆಂಟ್ರಲ್ ವಿಸ್ಟಾ ಹೊರತುಪಡಿಸಿ ಏನೂ ಕಾಣಿಸುವುದಿಲ್ಲ ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ಆಮ್ಲಜನಕ, ವೆಂಟಿಲೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆ ಮತ್ತು ಅವುಗಳನ್ನು ಪಡೆಯಲು ಜನರು ಪಡುತ್ತಿರುವ ಸಂಕಟದ ಬಗ್ಗೆ ಒಂದು ನಿಮಿಷದ ವಿಡಿಯೋವನ್ನು ಗಾಂಧಿ ಹಂಚಿಕೊಂಡಿದ್ದಾರೆ.

Last Updated : May 11, 2021, 4:07 PM IST

ABOUT THE AUTHOR

...view details