ತಿರುವನಂತಪುರಂ (ಕೇರಳ): ವಿವಿಧ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ಕೇರಳದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 'ಸೂಪರ್-ಫಾಸ್ಟ್ ಮೋಡ್'ನಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆ ನಡೆಯುತ್ತಿದೆ. 22 ದಿನಗಳ ಸುದೀರ್ಘ ಐಶ್ವರ್ಯ ಕೇರಳ ಯಾತ್ರೆಯನ್ನು ಉದ್ಘಾಟಿಸುವಾಗ ಕಾಂಗ್ರೆಸ್ನ ಮುಖಂಡ ರಾಹುಲ್ ಗಾಂಧಿ ತಿರುವನಂತಪುರಂನ ಶಂಕುಮುಖಂನಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿರುವುದನ್ನು ತೀವ್ರವಾಗಿ ಟೀಕಿಸಿದರು. ಜೊತೆಗೆ ಪಿಎಸ್‌ಸಿ ರ‍್ಯಾಂಕ್ ಹೋಲ್ಡರ್ ಪ್ರತಿಭಟನೆ ಬಗ್ಗೆ ಧ್ವನಿ ಎತ್ತಿದರು. ಬಹಳ ದಿನಗಳ ನಂತರ ಎಲ್ಡಿಎಫ್ ಸರ್ಕಾರದ ಮೇಲೆ ಸಾರ್ವಜನಿಕವಾಗಿ ರಾಹುಲ್ ವಾಗ್ದಾಳಿ ನಡೆಸಿರುವುದು ಇಲ್ಲಿ ಗಮನಾರ್ಹ. ಚಿನ್ನ ಕಳ್ಳಸಾಗಣೆ ಪ್ರಕರಣ, ಪಿಎಸ್‌ಸಿ ನೇಮಕಾತಿ ಹಗರಣ ಮತ್ತು ಆಳ ಸಮುದ್ರದ ಮೀನುಗಾರಿಕೆ ಟ್ರಾಲರ್‌ಗಳ ವಿವಾದಗಳನ್ನೂ ಗುರಿಯಾಗಿಸಿಕೊಂಡು ಆಡಳಿತಾರೂಢರನ್ನ ಕುಟುಕಿದರು.
ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು, ಜನಸಾಮಾನ್ಯರು ಜೋರಾಗಿ ಹರ್ಷೋದ್ಗಾರ ಮತ್ತು ಚಪ್ಪಾಳೆಯೊಂದಿಗೆ ಸ್ವೀಕರಿಸಿದರು.
ಕೇರಳದಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಓದಿ:ಮೋದಿ ದಂಗೆಕೋರ, ಟ್ರಂಪ್ಗೆ ಆದ ದುರ್ಗತಿ ಇವರಿಗೂ ಬರಲಿದೆ: ಮಮತಾ ಬ್ಯಾನರ್ಜಿ
ಮಂಗಳವಾರ ಬೆಳಗ್ಗೆ ವಿಧಾನಸಭೆ ಚುನಾವಣೆ ಮತ್ತು ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಯುಡಿಎಫ್ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಗೆಲುವಿನ ಸಾಮರ್ಥ್ಯವನ್ನು ಕೇಂದ್ರೀಕರಿಸಿ ರಾಜ್ಯ ನಾಯಕತ್ವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.
ಅಭ್ಯರ್ಥಿಗಳನ್ನು ನಿರ್ಧರಿಸುವಲ್ಲಿ ಹಿರಿತನವನ್ನು ಪರಿಗಣಿಸುವುದರ ಹೊರತಾಗಿ, ಹೆಚ್ಚಿನ ಯುವಕ ಮತ್ತು ಮಹಿಳೆಯರಿಗೆ ಉಮೇದುವಾರಿಕೆ ನೀಡಬೇಕು ಎಂದರು. ಯುಡಿಎಫ್ ಒಟ್ಟಾಗಿ ನಿಂತು ಚುನಾವಣೆಗಳನ್ನು ಎದುರಿಸಬೇಕು ಮತ್ತು ಒಳಗೆ ಘರ್ಷಣೆಗಳನ್ನ ತಪ್ಪಿಸಬೇಕು ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣೆಗೆ ಯುಡಿಎಫ್ ಒಳಗೆ ಸೀಟು ಹಂಚಿಕೆ ಕುರಿತು ದ್ವಿಪಕ್ಷೀಯ ಚರ್ಚೆಗಳು ಫೆಬ್ರವರಿ 26 ರಿಂದ ಪ್ರಾರಂಭವಾಗಲಿವೆ. ಐಶ್ವರ್ಯ ಕೇರಳ ಯಾತ್ರೆಯ ಪರಾಕಾಷ್ಠೆಯ ನಂತರ, ರಾಜ್ಯ ಕಾರ್ಯದರ್ಶಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಯುವ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಲು ಗಾಂಧಿ ನೇರವಾಗಿ ಹೋದರು. ಪ್ರತಿಭಟನಾ ನಿರತ ಉದ್ಯೋಗಾಕಾಂಕ್ಷಿಗಳೊಂದಿಗೆ ಮಾತನಾಡಿದರು.