ಮುಜಾಫರ್‌ಪುರ (ಬಿಹಾರ) : ಉತ್ತರ ಬಿಹಾರದ ಅತಿದೊಡ್ಡ ವೈದ್ಯಕೀಯ ಸಂಸ್ಥೆಯಾದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಸ್‌ಕೆಎಂಸಿಹೆಚ್) ವಿದ್ಯಾರ್ಥಿಯೊಬ್ಬರ ಮೇಲೆ ರ‍್ಯಾಗಿಂಗ್ ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿಯು ಪ್ಯಾರಾಮೆಡಿಕಲ್ ಅಧ್ಯಯನ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಪ್ರಾಂಶುಪಾಲ ಪ್ರೊ. ಅಭಾ ರಾಣಿ ಸಿನ್ಹಾ ಅವರು, 60 ಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು 2022ರ ಬ್ಯಾಚ್‌ನವರು ಎಂಬುದಾಗಿ ತಿಳಿದುಬಂದಿದೆ.
ಎಸ್‌ಕೆಎಂಸಿಹೆಚ್‌ನಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್ : 2023ನೇ ಬ್ಯಾಚ್‌ನ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬರು ಲಿಖಿತ ದೂರಿನ ಅರ್ಜಿಯನ್ನು ಪ್ರಾಂಶುಪಾಲರಿಗೆ ನೀಡಿ, ರ‍್ಯಾಗಿಂಗ್ ಬಗ್ಗೆ ದೂರು ನೀಡಿದ್ದರು. ಇದೇ ವೇಳೆ ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ತನ್ನ ಸೀನಿಯರ್‌ಗಳು ಪ್ರಯೋಗಾಲಯದಲ್ಲಿ ತನಗೆ ಸಾಕಷ್ಟು ರ‍್ಯಾಗಿಂಗ್ ಮಾಡುತ್ತಿದ್ದರು. ಇದರಿಂದ ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಎಂದು ವಿದ್ಯಾರ್ಥಿ ದೂರಿನಲ್ಲಿ ಹೇಳಿದ್ದಾರೆ. ದೂರಿನ ನಂತರ, ಪ್ರಾಂಶುಪಾಲರು ರ‍್ಯಾಗಿಂಗ್ ವಿರೋಧಿ ಸಮಿತಿಯ ಸಭೆಯನ್ನು ಕರೆದರು. ಇದರಲ್ಲಿ ಆರೋಪಿಗಳಾದ ವಿದ್ಯಾರ್ಥಿಗಳನ್ನು ಕೂಡ ಕರೆಸಿ, ರ‍್ಯಾಗಿಂಗ್ ಮಾಡಿದ್ದಕ್ಕಾಗಿ ಅಮಾನತು ಮಾಡಿದ್ದಾರೆ.
ಪ್ರಾಂಶುಪಾಲರ ಕಚೇರಿ ಎದುರು ಪ್ರತಿಭಟನೆ : ಇದಕ್ಕೂ ಮುನ್ನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ರ‍್ಯಾಗಿಂಗ್ ವಿರುದ್ಧ ಪ್ರಾಂಶುಪಾಲರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದರು. ಪ್ರಾತ್ಯಕ್ಷಿಕೆ ಬಳಿಕ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರಿನ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಪ್ರಾಂಶುಪಾಲರು ಸಂತ್ರಸ್ತ ವಿದ್ಯಾರ್ಥಿಗೆ ಕರೆ ಮಾಡಿದ್ದಾರೆ. ನಂತರ ವಿದ್ಯಾರ್ಥಿಯೊಂದಿಗೆ ಮಾತನಾಡಿದ ಬಳಿಕ ಆರೋಪಿ ವಿದ್ಯಾರ್ಥಿಗಳನ್ನೂ ಕರೆಸಿದ್ದರು. ನಂತರ ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳಿಗೆ ಅವರು ಛೀಮಾರಿ ಕೂಡಾ ಹಾಕಿದ್ದಾರೆ.