ಹೈದರಾಬಾದ್:2024ರ ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸೋಶಿಯಲ್ ಮೀಡಿಯಾ ವಾರ್ ಜೋರಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ಅನಿಮೇಟೆಡ್ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ರಾಹುಲ್ ಭಾರತವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಶನಿವಾರ ತನ್ನ ಟ್ವಿಟರ್ ಖಾತೆಯಲ್ಲಿ ಎರಡು ನಿಮಿಷಗಳ ಅನಿಮೇಟೆಡ್ ವಿಡಿಯೋ ಶೇರ್ ಮಾಡಿರುವ ಬಿಜೆಪಿ "ರಾಗಾ...ಏಕ್ ಮೊಹ್ರಾ ಎಂಬ ಶೀರ್ಷಿಕೆ ನೀಡಿದೆ. ಭಾರತದ ಬೆಳವಣಿಗೆಯ ಕಥೆಯನ್ನು ತಡೆಯಲು ವಿದೇಶಿಯರು ಪ್ರಯತ್ನಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ''ಮೋದಿ ಚುಕ್ಕಾಣಿ ಹಿಡಿದಿರುವ ಭಾರತವು ವಿಶ್ವದ ಮುಂದಿನ ಸೂಪರ್ ಪವರ್ ಆಗಲು ಸಜ್ಜಾಗಿದೆ. 2024ರಲ್ಲಿ ಮೋದಿ ಹೊರಬೀಳಬೇಕು. ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆಯಲು ಇದು ನಮ್ಮ ಹೋರಾಟದ ಕೊನೆಯ ಅವಕಾಶವಾಗಿದೆ. ಭಾರತವನ್ನು ಒಡೆಯುವ ಮಾರ್ಗವನ್ನು ನಾವು ಕಂಡುಕೊಳ್ಳಬೇಕಾಗಿದೆ. ಭಾರತವನ್ನು ಆಂತರಿಕವಾಗಿ ವಿಭಜಿಸಿ, ಭಾರತದಲ್ಲಿ ವ್ಯಾಪಾರ ಹೂಡಿಕೆಯನ್ನು ನಿರುತ್ಸಾಹಗೊಳಿಸಲು ಅಲ್ಪಸಂಖ್ಯಾತರ ದ್ವೇಷದ ನಿರೂಪಣೆಯನ್ನು ಹರಡಿ, ಯಾವುದೇ ಬೆಲೆ ತೆತ್ತಾದರೂ ಮೋದಿಯನ್ನು ನಿಲ್ಲಿಸಬೇಕು'' ಎಂಬ ಹಿನ್ನೆಲೆ ಧ್ವನಿ ವಿಡಿಯೋದಲ್ಲಿದೆ.
ಇದನ್ನೂ ಓದಿ:ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಹೆಚ್ಚು ಶಿಕ್ಷೆ ಪಡೆದ ಭಾರತದ ಮೊದಲ ವ್ಯಕ್ತಿ ನಾನು: ರಾಹುಲ್ ಗಾಂಧಿ
ನಂತರದಲ್ಲಿ ಸೂಟ್ ಮತ್ತು ಟೈ ಧರಿಸಿರುವ ಅನಿಮೇಟೆಡ್ ವಿದೇಶಿ ಪಾತ್ರವೊಂದು ತನ್ನ ಫೋನ್‌ನಲ್ಲಿ ಭಾರತೀಯ ವಿರೋಧ ಪಕ್ಷದ ನಾಯಕ ಎಂದು ಡಯಲ್ ಮಾಡುವುದನ್ನು ಮತ್ತು ಫೋನ್ಅನ್ನು ರಾಹುಲ್ ಗಾಂಧಿ ಎತ್ತಿಕೊಳ್ಳುವುದನ್ನು ತೋರಿಸಲಾಗಿದೆ. ಮುಂದಿನ ದೃಶ್ಯದಲ್ಲಿ ಅನಿಮೇಟೆಡ್ ರಾಗಾ ವಿದೇಶಿಯರೊಂದಿಗೆ ಕೈಕುಲುಕುತ್ತಾ ಕುಳಿತಿದ್ದು, ಅವರಿಗೆ ಆಂತರಿಕ ನೀತಿ ದಾಖಲೆಗಳನ್ನು ಹಸ್ತಾಂತರಿಸುವುದು ಮತ್ತು ಪ್ರತಿಯಾಗಿ ವಿದೇಶಿಯರಿಂದ ಬ್ರೇಕ್ ಇಂಡಿಯಾ ಸ್ಟ್ರಾಟಜಿ ಬುಕ್ಲೆಟ್ಅನ್ನು ಸ್ವೀಕರಿಸುತ್ತಿರುವುದು ಬಿಂಬಿಸಲಾಗಿದೆ.
ಇದನ್ನು ಅನುಸರಿಸಿ ರಾಹುಲ್ ಅಲ್ಪಸಂಖ್ಯಾತ ನಾಯಕರನ್ನು ಭೇಟಿಯಾಗುವುದು ಮತ್ತು ವಿದೇಶಿ ಮಾಧ್ಯಮ ಕಚೇರಿಗಳಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ. ಭಾರತದಲ್ಲಿ ಮುಸ್ಲಿಮರು ಮಾತ್ರವಲ್ಲದೆ ದಲಿತರು, ಸಿಖ್ಖರು ಎಲ್ಲರೂ ಕಿರುಕುಳಕ್ಕೊಳಗಾಗಿದ್ದಾರೆ. ರಾಗಾ ಒಂದು ಭರವಸೆ. ಅದು ಭಾರತಕ್ಕೆ ಅಲ್ಲ. ಭಾರತ ವಿರೋಧಿ ಶಕ್ತಿಗಳಿಗೆ. ರಾಗಾರನ್ನು ಭಾರತವನ್ನು ಒಡೆಯಲು ಬಳಸಲಾಗುವ ಮೊಹ್ರಾ. ರಾಗಾ ವಿದೇಶಿ ಶಕ್ತಿಗಳಿಗೆ ಮಂಚೂರಿಯನ್ ಅಭ್ಯರ್ಥಿ ಎನ್ನುವ ಮೂಲಕ ಬಿಜೆಪಿಯ ವಿಡಿಯೋ ಮುಕ್ತವಾಗುತ್ತದೆ.
ಈ ವಿಡಿಯೋಗೆ ಸಾಮಾಜಿಕ ಬಳಕೆದಾರರು ತಮ್ಮದೇ ಆದ ದಾಟಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಳಪೆ ಗ್ರಾಫಿಕ್ಸ್ ಮತ್ತು ಭಯಾನಕ ಡೈಲಾಗ್‌ಗಳಿಗಾಗಿ ಟೀಕೆಗೊಳಗಾಗಿರುವ ಪ್ರಭಾಸ್ ಅಭಿನಯದ ಚಿತ್ರವಾದ ಆದಿಪುರುಷನೊಂದಿಗೆ ಹೋಲಿಸಲಾಗಿದೆ. ಆದಿಪುರುಷಕ್ಕಿಂತ ಗ್ರಾಫಿಕ್ಸ್ ಉತ್ತಮವಾಗಿದೆ ಮತ್ತು ರಾವಣನಿಗಿಂತ ರಾಗಾ ಪಾತ್ರ ಉತ್ತಮವಾಗಿದೆ ಎಂದು ಟ್ವಿಟರ್ ಬಳಕೆದಾರ ವಿಪಿನ್ ತಿವಾರಿ ಬರೆದಿದ್ದಾರೆ. ದೇಶಭಕ್ತಿಯು ದುಷ್ಟರ ಕೊನೆಯ ಉಪಾಯವಾಗಿದೆ.. ಈ ಅನಿಮೇಷನ್ ಅದನ್ನು ಬಲಪಡಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ:ಕೇಂದ್ರ ಸರ್ಕಾರಕ್ಕೆ ಏನಾದರು ಪ್ರಶ್ನಿಸಿದರೆ ಕಾಂಗ್ರೆಸ್ ಮೇಲೆಯೇ ಆರೋಪ ಹೊರಿಸುತ್ತದೆ: ರಾಹುಲ್ ಗಾಂಧಿ