ಕರ್ನಾಟಕ

karnataka

ETV Bharat / bharat

ನಕಲಿ ಫಿಂಗರ್ ಪ್ರಿಂಟ್ ಜಾಲ: ನಾಲ್ವರು ಆರೋಪಿಗಳ ಬಂಧನ - ಬೆರಳಚ್ಚು ಒಂದು ವರ್ಷದ ತನಕ ಇರುತ್ತದೆ

ವಿದೇಶಕ್ಕೆ ತೆರಳಲು ಬೆರಳಚ್ಚು ಬದಲಾಯಿಸುತ್ತಿದ್ದ ತಂಡವನ್ನು ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ. ಮಲ್ಕಾಜಿಗಿರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ರಾಚಕೊಂಡ ಸಿಪಿ ಮಹೇಶ್ ಭಾಗವತ್ ತಿಳಿಸಿದ್ದಾರೆ. ನಕಲಿ ಬೆರಳಚ್ಚು ಮೂಲಕ ಕುವೈತ್​​ಗೆ ವ್ಯಕ್ತಿಗಳನ್ನು ಕಳುಹಿಸುವ ಸಂಚು ನಡೆದಿದೆ ಎಂದು ಅವರು ಹೇಳಿದ್ದಾರೆ.

ನಕಲಿ ಫಿಂಗರ್ ಪ್ರಿಂಟ್ ಜಾಲ
ನಕಲಿ ಫಿಂಗರ್ ಪ್ರಿಂಟ್ ಜಾಲ

By

Published : Sep 1, 2022, 7:25 PM IST

ರಾಚಕೊಂಡ (ತೆಲಂಗಾಣ): ಕೈಯಲ್ಲಿನ ಬೆರಳಚ್ಚು ಬದಲಿಸಿ, ವಿದೇಶಕ್ಕೆ ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಕಳುಹಿಸಲು ಯತ್ನಿಸುತ್ತಿದ್ದ ಗ್ಯಾಂಗ್​ವೊಂದನ್ನು ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ. ಬೆರಳಚ್ಚು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು, ನಾಗಮುನೇಶ್ವರ ರೆಡ್ಡಿ, ಸಾಗಬಾಳ ವೆಂಕಟ್ ರಮಣ, ಬೋವಿಲ್ಲ ಶಿವ ಶಂಕರ ರೆಡ್ಡಿ ಹಾಗೂ ರೇಂಡ್ಲ ರಾಮ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸರ್ಜಿಕಲ್ ಕೈಗವಸುಗಳು, ಸಿಪ್ಲಾಡಿನ್ ಆಯಿಂಟ್ಮೆಂಟ್, ಆಂಟಿ ಬಯೋಟಿಕ್ ಮಾತ್ರೆಗಳು, ಸರ್ಜಿಕಲ್ ಟೇಪ್, ಸರ್ಜಿಕಲ್ ಬ್ಲೇಡ್‌, ಮೊಬೈಲ್​ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನಕಲಿ ಫಿಂಗರ್ ಪ್ರಿಂಟ್ ಜಾಲ

ಶಸ್ತ್ರಚಿಕಿತ್ಸೆಯ ನಂತರ ಬೆರಳಚ್ಚು ಒಂದು ವರ್ಷದ ತನಕ ಇರುತ್ತದೆ. ಹಾಗಾಗಿ ನಕಲಿ ಬೆರಳಚ್ಚು ಮೂಲಕ ವಿದೇಶಕ್ಕೆ ಹೋಗಲು ಸಂಚು ರೂಪಿಸಿದ್ದರು. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ನಾಗಮುನೀಶ್ವರ ರೆಡ್ಡಿ ತಿರುಪತಿಯಲ್ಲಿ ರೇಡಿಯಾಲಜಿ ಕೋರ್ಸ್ ಮಾಡಿದ್ದಾನೆ. ಇದರ ಮೂಲಕವೇ ವೀಸಾ ಅವಧಿ ಮುಗಿದಿರುವವರನ್ನು ಕುವೈತ್​ನಿಂದ ವಾಪಸ್​ ಕರೆಸಿಕೊಳ್ಳಲಾಗುತ್ತಿತ್ತು ಎಂದು ರಾಚಕೊಂಡ ಸಿಪಿ ಮಹೇಶ್​ ಭಾಗವತ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಲರ್ ಪ್ರಿಂಟರ್​ನಿಂದಲೇ ಖೋಟಾ ನೋಟು ಮುದ್ರಣ: ಇಬ್ಬರ ಬಂಧನ

ಶ್ರೀಲಂಕಾದಿಂದ ಬಂದವರಲ್ಲಿ ಕೆಲವರು ಬೆರಳಚ್ಚು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದು ಕಂಡು ಬಂದಿದೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ರಿಮಾಂಡ್‌ಗೆ ಒಪ್ಪಿಸಲಾಗುತ್ತಿದೆ. ಆರೋಪಿಗಳಲ್ಲಿ ಎಪಿಯ ಆರ್‌ಎಂಪಿಗಳೂ ಸೇರಿದ್ದಾರೆ ಎಂದು ಭಾಗವತ್​ ಹೇಳಿದ್ದಾರೆ.

ABOUT THE AUTHOR

...view details