ಕರ್ನಾಟಕ

karnataka

ETV Bharat / bharat

ಕೋವಿಡ್ ವ್ಯಾಕ್ಸಿನ್ ಬದಲಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು: ನರ್ಸ್, ವೈದ್ಯ ಅಮಾನತು - ಕೋವಿಶೀಲ್ಡ್ ಬದಲು ಎಆರ್​ವಿ ವ್ಯಾಕ್ಸಿನ್​

ವ್ಯಕ್ತಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಬದಲು, ರೇಬಿಸ್ ವ್ಯಾಕ್ಸಿನ್ ನೀಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

rabies-vaccine-given-instead-of-corona-vaccine-in-thane
ಕೋವಿಡ್ ವ್ಯಾಕ್ಸಿನ್ ಬದಲಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು: ನರ್ಸ್, ವೈದ್ಯ ಅಮಾನತು

By

Published : Sep 29, 2021, 11:17 AM IST

ಥಾಣೆ, ಮಹಾರಾಷ್ಟ್ರ:ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಬಂದ ವ್ಯಕ್ತಿಗೆ ಆಕಸ್ಮಿಕವಾಗಿ ಆ್ಯಂಟಿ - ರೇಬಿಸ್ ಚುಚ್ಚು ಮದ್ದು ನೀಡಿದ ಘಟನೆ ಮಹಾರಾಷ್ಟ್ರದ ಥಾಣೆ ಬಳಿಯಲ್ಲಿರುವ ಆರೋಗ್ಯ ಕೇಂದ್ರವೊಂದರಲ್ಲಿ ನಡೆದಿದೆ.

ಸೋಮವಾರ ಕಲ್ವಾ ಪ್ರದೇಶದಲ್ಲಿರುವ ಆಟ್ಕೋನೇಶ್ವರ್ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. 40 ವರ್ಷದ ವಯಸ್ಸಿನ ವ್ಯಕ್ತಿ ಕೋವಿಶೀಲ್ಡ್ ವ್ಯಾಕ್ಸಿನ್​ಗಾಗಿ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ತಪ್ಪು ಗ್ರಹಿಕೆಯಿಂದಾಗಿ ರೇಬಿಸ್ ವೈರಸ್​ಗೆ ನೀಡುವ ಎಆರ್​ವಿ ಇಂಜೆಕ್ಷನ್ ನೀಡುವ ಸರದಿಯಲ್ಲಿ ಕುಳಿತುಕೊಂಡಿದ್ದನು.

ಈ ವೇಳೆ, ನರ್ಸ್​ ಕೀರ್ತಿ ಪೊಪೆರೆ ಆತನ ಮೆಡಿಕಲ್ ರಿಪೋರ್ಟ್​ಗಳನ್ನು ನೋಡದೇ ರೇಬಿಸ್ ಇಂಜೆಕ್ಷನ್ ನೀಡಿದ್ದಾಳೆ. ಈ ಘಟನೆ ಗೊತ್ತಾಗುತ್ತಿದ್ದಂತೆ ಇಂಜೆಕ್ಷನ್ ಪಡೆದ ವ್ಯಕ್ತಿಯನ್ನು ವೈದ್ಯರು ನಿಗಾದಲ್ಲಿ ಇಟ್ಟಿದ್ದಾರೆ.

ಈ ಕುರಿತು ಥಾಣೆ ಮುನಿಸಿಪಲ್ ಕಾರ್ಪೋರೇಷನ್ ಹೆಚ್ಚುವರಿ ಆಯುಕ್ತ ಸಂದೀಪ್ ಮಾಲ್ವಿ ಪ್ರತಿಕ್ರಿಯೆ ನೀಡಿದ್ದು, ಆರೋಗ್ಯ ಕೇಂದ್ರದ ವೈದ್ಯ ಮತ್ತು ನರ್ಸ್​ ಅನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸತತ ಎರಡನೇ ದಿನವೂ 20,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ದಾಖಲು..

ABOUT THE AUTHOR

...view details