ಕರ್ನಾಟಕ

karnataka

ETV Bharat / bharat

ಕುತುಬ್​ ಮಿನಾರ್​ ಸಂಕೀರ್ಣದಲ್ಲಿ ದೇವಾಲಯ ಕೆಡವಿ ಮಸೀದಿ ಕಟ್ಟಲಾಗಿಲ್ಲ: ಪುರಾತತ್ವ ಇಲಾಖೆ, ತೀರ್ಪು ಕಾಯ್ದಿರಿಸಿದ ಕೋರ್ಟ್​ - ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಪಷ್ಟನೆ

ಕುತುಬ್​ ಮಿನಾರ್​ ಸಂಕೀರ್ಣದಲ್ಲಿ ಹಿಂದೂ ದೇವರ ವಿಗ್ರಹಗಳು ಪತ್ತೆಯಾದ ಬಳಿಕ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆದಿದ್ದು, ಜೂನ್​ 9 ಕ್ಕೆ ಕೋರ್ಟ್​ ಆದೇಶ ನೀಡಲಿದೆ.

qutub-minar-row-no-evidence
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ

By

Published : May 24, 2022, 5:35 PM IST

ನವದೆಹಲಿ:ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಮಸೀದಿಯನ್ನು ಈ ಹಿಂದೆ ದೇವಾಲಯ ಅಥವಾ ಯಾವುದೇ ಕಟ್ಟಡ ಕೆಡವಿ ನಿರ್ಮಿಸಲಾಗಿದೆ ಯಾವುದೇ ಪುರಾವೆಗಳಿಲ್ಲ. ಇದು ಪೂಜಾ ಸ್ಥಳವೇ ಅಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.

ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ನೂರಾರು ವರ್ಷಗಳ ಹಿಂದೆ ಕೆಡವಲಾದ ಹಿಂದೂ ಮತ್ತು ಜೈನ ದೇವಾಲಯಗಳನ್ನು ಮರು ಸ್ಥಾಪಿಸಿ, ಪೂಜೆ ಮಾಡಲು ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ವೇಳೆ ಪುರಾತತ್ವ ಇಲಾಖೆ ಈ ಸ್ಪಷ್ಟನೆ ನೀಡಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಧರಂವೀರ್ ಶರ್ಮಾ ಅವರು, ಕುತುಬ್ ಮಿನಾರ್ ಅನ್ನು ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಹಿಂದೂ ಚಕ್ರವರ್ತಿ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದಾರೆ. ಇದನ್ನು ಕುತುಬ್ ಅಲ್-ದಿನ್ ಐಬಕ್ ನಿರ್ಮಿಸಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ವಿವಾದ ಸ್ಫೋಟಗೊಂಡಿದೆ.

ಅಲ್ಲದೇ, ಸಂಕೀರ್ಣದಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ. 27 ಹಿಂದೂ- ಜೈನ ದೇವಾಲಯಗಳನ್ನು ಕೆಡವಿ ಪಡೆದ ವಸ್ತುಗಳಿಂದ ಕುವ್ವಾತ್ - ಉಲ್ - ಇಸ್ಲಾಂ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ಎಎಸ್​ಐ ಸ್ಪಷ್ಟನೆ ಏನು?:ಕುತುಬ್ ಮಿನಾರ್ ಎಂದಿಗೂ ಪೂಜಾ ಸ್ಥಳವಲ್ಲ. ಇಲ್ಲಿ ಯಾವುದೇ ದೇವಸ್ಥಾನ, ಕಟ್ಟಡವನ್ನು ಕಟ್ಟಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇಲ್ಲಿರುವ ದೇವಾಲಯಗಳ ಕಬ್ಬಿಣದ ಸ್ತಂಭ ಮತ್ತು ಅವಶೇಷಗಳು ಅವುಗಳ ಮೂಲ ಸ್ಥಳದಲ್ಲಿವೆಯೇ ಅಥವಾ ಹೊರಗಿನಿಂದ ತರಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಲೂ ಯಾವುದೇ ಪುರಾವೆಗಳಿಲ್ಲ ಎಂದಿದೆ.

ಇದಲ್ಲದೇ, ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ದೇವಾಲಯವನ್ನು ಪುನರುಜ್ಜೀವನಗೊಳಿಸುವ ಮನವಿಯನ್ನು ವಿರೋಧಿಸಿತು. ಕುತುಬ್ ಮಿನಾರ್ 1914 ರಿಂದ ಸಂರಕ್ಷಿತ ಸ್ಮಾರಕವಾಗಿದೆ. ಅದರ ರಚನೆಯನ್ನು ಈಗ ಬದಲಾಯಿಸಲಾಗುವುದಿಲ್ಲ ಎಂದು ಅದು ಹೇಳಿದೆ.

ಅರ್ಜಿದಾರರ ವಾದವೇನು?:ಇನ್ನು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಹರಿಶಂಕರ್ ಜೈನ್, ಪೂಜೆ ಮಾಡುವ ಸಂವಿಧಾನದ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಸಂಕೀರ್ಣದಲ್ಲಿ ವಿಗ್ರಹಗಳಿವೆ. ಈ ಹಿಂದೆ ವಿಗ್ರಹಗಳನ್ನು ಸಂರಕ್ಷಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ದೇವರನ್ನು ಉಳಿಸಿಕೊಳ್ಳುವುದು ನಮ್ಮ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದರು.

ವಾದ- ಪ್ರತಿವಾದ ಆಲಿಸಿದ ದೆಹಲಿಯ ಸಾಕೇತ್​ ನ್ಯಾಯಾಲಯ ಜೂನ್ 9 ರಂದು ಕುತುಬ್ ಮಿನಾರ್ ಪ್ರಕರಣದಲ್ಲಿ ತನ್ನ ಆದೇಶವನ್ನು ಪ್ರಕಟಿಸುವುದಾಗಿ ಹೇಳಿದೆ. ಅಲ್ಲದೇ, ಒಂದು ವಾರದೊಳಗೆ ಲಿಖಿತ ಆಕ್ಷೇಪಗಳನ್ನು ಸಲ್ಲಿಸಲು ಸಂಬಂಧಪಟ್ಟ ಕಕ್ಷಿದಾರರಿಗೆ ತಿಳಿಸಲಾಗಿದೆ.

ಓದಿ:ಜಮ್ಮು-ಕಾಶ್ಮೀರ ಪೊಲೀಸ್​ ಪದಕದಲ್ಲಿ ಶೇಖ್​ ಅಬ್ದುಲ್ಲಾ ಫೋಟೋ ತೆಗೆಯಲು ಲೆಫ್ಟಿನೆಂಟ್​ ಗವರ್ನರ್​ ಆದೇಶ

ABOUT THE AUTHOR

...view details