ಮುಂಬೈ (ಮಹಾರಾಷ್ಟ್ರ): ದೇಶದ ಪ್ರಮುಖ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಯಾದ ಲಾರ್ಸೆನ್ ಮತ್ತು ಟೂಬ್ರೊ (ಎಲ್ ಅಂಡ್ ಟಿ - L&T) ಕತಾರ್‌ನ ಆದಾಯ ತೆರಿಗೆ ಇಲಾಖೆಯು 111.31 ಕೋಟಿ ರೂಪಾಯಿ ಮತ್ತು 127.64 ಕೋಟಿ ರೂಪಾಯಿಗಳ ಎರಡು ದಂಡಗಳನ್ನು ವಿಧಿಸಿದೆ. ಇಲಾಖೆಯ ಮೌಲ್ಯಮಾಪನಕ್ಕೆ ಹೋಲಿಸಿದರೆ ಕಂಪನಿಯು ಘೋಷಿಸಿದ ಆದಾಯದಲ್ಲಿ ಆಪಾದಿತ ವ್ಯತ್ಯಾಸಕ್ಕಾಗಿ ಈ ದಂಡ ಹಾಕಲಾಗಿದೆ. ಈ ಕುರಿತು ಕಂಪನಿಯೇ ಶುಕ್ರವಾರ ತನ್ನ ಷೇರು ವಿನಿಮಯ ಫೈಲಿಂಗ್‌ನಲ್ಲಿ ಉಲ್ಲೇಖಿಸಿದೆ.
ಏಪ್ರಿಲ್ 2016ರಿಂದ 2017ರ ಮಾರ್ಚ್ ಮತ್ತು 2017ರ ಏಪ್ರಿಲ್ನಿಂದ 2018ರ ಮಾರ್ಚ್ ನಡುವಿನ ತೆರಿಗೆ ಮೌಲ್ಯಮಾಪನ ಅವಧಿಗೆ ಒಟ್ಟು 238.9 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ಇದು ಅನಿಯಂತ್ರಿತ ಮತ್ತು ನ್ಯಾಯಸಮ್ಮತವಲ್ಲ ಎಂದು ಕಂಪನಿಯು ನಂಬಿದೆ. ಆದ್ದರಿಂದ ಈ ದಂಡವನ್ನು ವಿಧಿಸುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಎಲ್ ಅಂಡ್ ಟಿ ಹೇಳಿದೆ.
ಇದನ್ನೂ ಓದಿ:8 ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕತಾರ್ ಕೋರ್ಟ್: ಆಘಾತ ವ್ಯಕ್ತಪಡಿಸಿದ ವಿದೇಶಾಂಗ ಸಚಿವಾಲಯ
ಮುಂದುವರೆದು, ಮೇಲ್ಮನವಿ ಮಟ್ಟದಲ್ಲಿ ಅನುಕೂಲಕರ ಫಲಿತಾಂಶದ ಬಗ್ಗೆ ಕಂಪನಿಯು ವಿಶ್ವಾಸ ಹೊಂದಿದೆ. ಕಂಪನಿಯ ಹಣಕಾಸು, ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ವಸ್ತು ಪ್ರತಿಕೂಲ ಪರಿಣಾಮಗಳನ್ನು ಬೀರಲ್ಲ ಎಂದೂ ಹೇಳಿಕೊಂಡಿದೆ. ಗಲ್ಫ್ ಪ್ರದೇಶವು ಎಲ್ ಅಂಡ್ ಟಿ ಕಂಪನಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಕಂಪನಿಯ ಆರ್ಡರ್ ಒಳಹರಿವಿನ ಶೇ.41ರಷ್ಟನ್ನು ಗಲ್ಫ್ನಿಂದ ಪಡೆದಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರ್ಡರ್ ಬುಕ್‌ನಲ್ಲಿ ಶೇ.33ರಷ್ಟು ಎಂದರೆ, 4,50,700 ಕೋಟಿ ಮೌಲ್ಯದ ಆರ್ಡರ್‌ಗಳ ಕೆಲಸ ಮಾಡಿದೆ.
ಸೆಮಿಕಂಡಕ್ಟರ್ ಡಿಸೈನ್ ಘಟಕ: ಮತ್ತೊಂದೆಡೆ, ಭಾರತದಲ್ಲಿ ಇತ್ತೀಚಿಗೆ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ 830 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡುವುದಾಗಿ ಎಲ್ ಅಂಡ್ ಟಿ ಘೋಷಿಸಿದೆ. ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಚಿಪ್‌ಗಳಿಗಾಗಿ ವಿನ್ಯಾಸ ಮಾಡಲು ಕಂಪನಿ ಬಯಸುತ್ತದೆ. ಇದನ್ನು ಪೇಟೆಂಟ್ ಮಾಡಬಹುದು ಮತ್ತು ಅತ್ಯಂತ ಮೌಲ್ಯಯುತವಾಗಿರುತ್ತದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಆರ್.ಶಂಕರ್ ರಾಮನ್ ತಿಳಿಸಿದ್ದಾರೆ.
ಕಂಪನಿಯ ಆಡಳಿತ ಮಂಡಳಿಯು ಸಂಪೂರ್ಣ ಸ್ವಾಮ್ಯದ ಪ್ರತ್ಯೇಕ ಸೆಮಿಕಂಡಕ್ಟರ್ ಅಂಗಸಂಸ್ಥೆ ರಚನೆಗೆ ಅನುಮೋದಿಸಿದೆ. ಈ ಅಂಗಸಂಸ್ಥೆಯು ಫ್ಯಾಬ್ಲೆಸ್ ಚಿಪ್ ಡಿಸೈನ್ ಘಟಕವನ್ನು ನಿರ್ವಹಿಸಲಿದೆ. ಭಾರತವು ಸೆಮಿಕಂಡಕ್ಟರ್ ಹಬ್ ಆಗುವತ್ತ ಹಜ್ಜೆ ಇಡುತ್ತಿದ್ದು, ಸ್ಥಳೀಯ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ದ್ವಿಗುಣಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಎಲ್ ಅಂಡ್ ಟಿ ಹೂಡಿಕೆ ಮುಂದಾಗಿದೆ. (ಐಎಎನ್ಎಸ್)
ಇದನ್ನೂ ಓದಿ:ಭಾರತೀಯರು ಸೇರಿದಂತೆ ವಿಶ್ವದಲ್ಲಿ ಈ ವರ್ಷ ಅತಿ ಹೆಚ್ಚಾಗಿ ಬಳಸಿದ 'ಪಾಸ್ವರ್ಡ್' ಯಾವುದು ಗೊತ್ತಾ?