ಕರ್ನಾಟಕ

karnataka

ETV Bharat / bharat

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಪುತ್ರಿ: ಮಗಳನ್ನು ಬೆಂಬಲಿಸಿದ ಎಲ್ಲರಿಗೂ ತಂದೆಯ ಧನ್ಯವಾದ - PV Sindhu

ತಮ್ಮ ಮಗಳಿಗೆ ಪ್ರೋತ್ಸಾಹ ನೀಡಿದ ಭಾರತ ಸರ್ಕಾರ, ಬೆಂಬಲಿಗರು, ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮತ್ತು ಮಾಧ್ಯಮಗಳಿಗೆ ಪಿ ವಿ ಸಿಂಧು ಅವರ ತಂದೆ ಪಿ ವಿ ರಮಣ ಧನ್ಯವಾದ ಅರ್ಪಿಸಿದ್ದಾರೆ. ಮಗಳ ಸಾಧನೆ ಬಗ್ಗೆ ಅವರು ಹೆಮ್ಮೆಪಟ್ಟಿದ್ದಾರೆ.

PV Sindhu's father response on winning bronze in women's single badminton, Tokyo Olympics
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಪಿವಿ ಸಿಂಧು

By

Published : Aug 1, 2021, 7:19 PM IST

Updated : Aug 1, 2021, 9:36 PM IST

ಹೈದರಾಬಾದ್​ :ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಈ ಹಿನ್ನೆಲೆ ಆಕೆಯ ತಂದೆ ರಮಣ ಅವರು ಮಗಳ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗಳಿಗೆ ಪ್ರೋತ್ಸಾಹ ನೀಡಿದ ಭಾರತ ಸರ್ಕಾರ, ಬೆಂಬಲಿಗರು, ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮತ್ತು ಮಾಧ್ಯಮಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಕಠಿಣ ಪರಿಶ್ರಮ ಹಾಗೂ ಒತ್ತಡದ ನಡುವೆ ಪದಕ ಗೆಲ್ಲಲು ಯಶಸ್ವಿಯಾಗಿದ್ದಾಳೆ ಎಂದು ಈ ವೇಳೆ ಮಗಳ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

ಹೆಚ್ಚಿನ ಓದಿಗೆ: Tokyo Olympics: ಕಂಚಿನ ಪದಕಕ್ಕೆ ಮುತ್ತಿಕ್ಕಿದ 'ಬೆಳ್ಳಿ ಹುಡುಗಿ' ಪಿ.ವಿ. ಸಿಂಧು

ಸಾಮಾನ್ಯವಾಗಿ ಮೂರನೇ ಮತ್ತು ನಾಲ್ಕನೇ ಪಂದ್ಯಗಳು ತುಂಬಾ ಕಠಿಣವಾಗಿರುತ್ತವೆ. ಅದರೂ ಸತತ ಪರಿಶ್ರಮದಿಂದ ಪದಕ ಗೆದ್ದಿದ್ದಕ್ಕೆ ತಂದೆಗೆ ತುಂಬಾ ಸಂತಸವಾಗಿದೆ. ನಿನ್ನೆಯ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದ ನಂತರ ಸಿಂಧು ಕಣ್ಣೀರು ಹಾಕಿದ್ದರು. ಆದರೆ, ಇಂದು ಆಕೆಗೆ ಒಳ್ಳೆಯದಾಗಿದೆ ಎಂದು ಅವರ ತಂದೆ ಖುಷಿ ಹಂಚಿಕೊಂಡಿದ್ದಾರೆ.

ಕಂಚು ಗೆದ್ದ ಪುತ್ರಿ: ಮಗಳನ್ನು ಬೆಂಬಲಿಸಿದ ಎಲ್ಲರಿಗೂ ತಂದೆಯ ಧನ್ಯವಾದ

ಈ ಬಾರಿ ಸಿಂಧು ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದರೆ ನನ್ನ ಜೊತೆ ಐಸ್​ ಕ್ರೀಂ ತಿನ್ನಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದೀಗ ನನ್ನ ಮಗಳು ಪದಕ ಗೆದ್ದಿದ್ದು, ಮೋದಿ ಜತೆ ಐಸ್​ಕ್ರೀಂ ತಿನ್ನಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನನಗೆ ತುಂಬಾ ಸಂತೋಷವಾಗಿದೆ, ರಿಯೋದಲ್ಲಿ ಅವಳು ಬೆಳ್ಳಿ ಪಡೆದಿದ್ದಳು. ಈ ಬಾರಿ ಕಂಚಿನ ಪದಕ ಪಡೆದಿದ್ದಾಳೆ. ನಿನ್ನೆ ಅವಳು ಸ್ವಲ್ಪ ಅಸಮಾಧಾನ ಹೊಂದಿದ್ದಳು, ನಾವು ಅವಳಿಗೆ ಧೈರ್ಯ ಹೇಳಿದ್ದೆವು ಎನ್ನುತ್ತಾರೆ ಸಿಂಧು ತಾಯಿ ವಿಜಯಾ

ಗೆಲುವಿನ ಬಗ್ಗೆ ಮಾತನಾಡಿದ ಸಿಂಧು ಸಹೋದರಿ ದಿವ್ಯಾ, ತುಂಬಾ ಸಂತೋಷವಾಗಿದೆ. ಆಕೆ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಇದು ಬಹಳ ದೊಡ್ಡ ಸಾಧನೆಯಾಗಿದೆ. ಅವಳು ಇಂದು ತನ್ನ ಪಂದ್ಯವನ್ನು ಸಕಾರಾತ್ಮಕ ಮನೋಭಾವದಿಂದ ಆಡಿದ್ದಳು ಎಂದು ಸಹೋದರಿ ಬಗ್ಗೆ ಹೆಮ್ಮೆಪಟ್ಟರು.

Last Updated : Aug 1, 2021, 9:36 PM IST

ABOUT THE AUTHOR

...view details