ಕರ್ನಾಟಕ

karnataka

ETV Bharat / bharat

ರಷ್ಯಾ ಅಧ್ಯಕ್ಷ ಪುಟಿನ್‌ ಇಂದು ಭಾರತಕ್ಕೆ: ಮೋದಿ ಜೊತೆ ಮಹತ್ವದ ಮಾತುಕತೆ - ರಷ್ಯಾ ಅಧ್ಯಕ್ಷ ಪುಟಿನ್‌ ಇಂದು ಭಾರತಕ್ಕೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು (ಸೋಮವಾರ) ಭಾರತಕ್ಕೆ ಆಗಮಿಸಲಿದ್ದು 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

Putin's arrival in Delhi today
ನರೇಂದ್ರ ಮೋದಿ ಹಾಗು ವ್ಲಾಡಿಮಿರ್ ಪುಟಿನ್

By

Published : Dec 6, 2021, 10:07 AM IST

ನವದೆಹಲಿ: 21ನೇ ಇಂಡೋ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ನವದೆಹಲಿಗೆ ಆಗಮಿಸಲಿದ್ದಾರೆ.

ಶೃಂಗಸಭೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ಹಾಗು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳು, ಅಂತಾರಾಷ್ಟ್ರೀಯ, ರಾಜಕೀಯ ಮತ್ತು ರಕ್ಷಣಾ ವಿಷಯಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ.


10ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ:

ಭಾರತ ಮತ್ತು ರಷ್ಯಾ ದೇಶಗಳ ನಡುವೆ ಸಂಪರ್ಕ, ಹಡಗು, ಬಾಹ್ಯಾಕಾಶ, ಮಿಲಿಟರಿ-ತಾಂತ್ರಿಕ ಸಹಕಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ 10ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಇದರ ಜತೆಗೆ, ಉಭಯ ದೇಶಗಳು 7.5 ಲಕ್ಷ AK-203 ಅಸಾಲ್ಟ್ ರೈಫಲ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

AK-203 ರೈಫಲ್‌ಗಳ ತಯಾರಿಕೆಗೆ ಅನುಮೋದನೆ:

ಭಾರತದ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಉತ್ತರ ಪ್ರದೇಶದ ಅಮೇಥಿಯ ಕೊರ್ವಾದಲ್ಲಿ ಐದು ಲಕ್ಷಕ್ಕೂ ಹೆಚ್ಚು AK-203 ಅಸಾಲ್ಟ್ ರೈಫಲ್‌ಗಳನ್ನು ಉತ್ಪಾದಿಸುವ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋಗೆ ಭೇಟಿ ನೀಡಿದ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತ ಎರಡೂ ಒಪ್ಪಂದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದವು.

ಇದನ್ನೂ ಓದಿ:ದೆಹಲಿಗೆ ಬಂದಿಳಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್

ABOUT THE AUTHOR

...view details