ಕರ್ನಾಟಕ

karnataka

ETV Bharat / bharat

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ ಆಶಾ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ 'ಆಶಾ' ಮೂರು ಮರಿಗಳಿಗೆ ಜನ್ಮ ಕೊಟ್ಟಿದೆ.

Kuno National Park
ಮೂರು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ ಆಶಾ

By ANI

Published : Jan 3, 2024, 11:01 PM IST

Updated : Jan 4, 2024, 12:04 PM IST

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾದ ಚೀತಾ ಆಶಾ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಸಚಿವರೊಬ್ಬರು ಬುಧವಾರ ತಿಳಿಸಿದ್ದಾರೆ.

"ಪರ್ರ್ಸ್ ಇನ್ ದಿ ವೈಲ್ಡ್! ಕುನೋ ನ್ಯಾಷನಲ್ ಪಾರ್ಕ್ ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂದು ಹಂಚಿಕೊಳ್ಳಲು ರೋಮಾಂಚನಗೊಂಡಿದೆ. ನಮೀಬಿಯಾದ ಚೀತಾ ಆಶಾಗೆ ಮೂರು ಮರಿಗಳು ಜನಿಸಿವೆ" ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಚೀತಾ ಯೋಜನೆಗೆ ಇದು ಘರ್ಜಿಸುವ ಯಶಸ್ಸು ದೊರೆತಿದೆ" ಎಂದು ಬಣ್ಣಿಸಿದ್ದಾರೆ. "ಯೋಜನೆಯಲ್ಲಿ ತೊಡಗಿರುವ ಎಲ್ಲಾ ತಜ್ಞರು, ಕುನೋ ವನ್ಯಜೀವಿ ಅಧಿಕಾರಿಗಳು ಮತ್ತು ಭಾರತದಾದ್ಯಂತ ವನ್ಯಜೀವಿ ಉತ್ಸಾಹಿಗಳಿಗೆ ನನ್ನ ದೊಡ್ಡ ಅಭಿನಂದನೆಗಳು" ಎಂದು ಸಚಿವ ಯಾದವ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಾರ್ಚ್ 2023ರಲ್ಲಿ, ನಂತರ ಜ್ವಾಲಾ ಎಂದು ಮರುನಾಮಕರಣಗೊಂಡ ಸಿಯಾಯಾ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅವುಗಳಲ್ಲಿ ಒಂದು ಮಾತ್ರ ಬದುಕುಳಿದಿತ್ತು. ಜ್ವಾಲಾ ಚೀತಾವನ್ನು ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು.

ಇದನ್ನೂ ಓದಿ:70 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಹೆಜ್ಜೆ ಇಟ್ಟ ಆಫ್ರಿಕನ್​​​ ಚೀತಾ.. ಏನಿದರ ವಿಶೇಷತೆ?

Last Updated : Jan 4, 2024, 12:04 PM IST

ABOUT THE AUTHOR

...view details