ಕರ್ನಾಟಕ

karnataka

ETV Bharat / bharat

ಜೂನ್ 15ರವರೆಗೆ ಇಲ್ಲ ಪುರಿ ಜಗನ್ನಾಥನ ದರ್ಶನ - corona effect on jagannath temple

ಎರಡನೇ ಕೋವಿಡ್ ಅಲೆ ತೀವ್ರಗೊಂಡಿರುವ ಕಾರಣದಿಂದಾಗಿ ಜಗನ್ನಾಥ ದೇವಾಲಯಕ್ಕೆ ಇರುವ ಪ್ರವೇಶ ನಿರ್ಬಂಧವನ್ನು ವಿಸ್ತರಿಸಿದೆ.

Darshan At Puri Jagannath Temple Restricted Till June 15
ಜೂನ್ 15ರವರೆಗೆ ಇಲ್ಲ ಪುರಿ ಜಗನ್ನಾಥನ ದರ್ಶನ

By

Published : May 18, 2021, 5:08 AM IST

ಭುವನೇಶ್ವರ್, ಒಡಿಶಾ:ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿಯು ದೇವಾಲಯಕ್ಕೆ ಸಾರ್ವಜನಿಕರಿಗೆ ಇರುವ ಪ್ರವೇಶ ನಿರ್ಬಂಧವನ್ನು ವಿಸ್ತರಣೆ ಮಾಡಿದ್ದು, ಜೂನ್ 15ರವರೆಗೆ ನಿಯಮ ಜಾರಿಯಲ್ಲಿರಲಿದೆ.

ಸೋಮವಾರ ಈ ಕುರಿತಂತೆ ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ ಸಭೆ ನಡೆಸಿದ್ದು, ಎರಡನೇ ಕೋವಿಡ್ ಅಲೆ ತೀವ್ರಗೊಂಡಿರುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಮುಖ್ಯ ಆಡಳಿತಾಧಿಕಾರಿ ಡಾ.ಕೃಷ್ಣಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ:ವಿಶ್ವದ ಅತಿ ಉದ್ದದ ಎಲ್​ಪಿಜಿ ಪೈಪ್​ಲೈನ್​​ಗೆ ಯೋಜನೆಗೆ ಚಾಲನೆ

ಈ ಸಭೆಯಲ್ಲಿ ಪುರಿ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಮತ್ತು ದೇವಾಲಯದ ಅಧಿಕಾರಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಕಾಲ ಕಾಲಕ್ಕೆ ಕೋವಿಡ್ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ABOUT THE AUTHOR

...view details