ಸಂಬಲ್ಪುರ:ಪುರಿ-ಸೂರತ್ ಎಕ್ಸ್‌ಪ್ರೆಸ್ ಟ್ರೈನ್ ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿರುವ ಘಟನೆ ಇಲ್ಲಿನ ಹತಿಬಾರಿ ಮತ್ತು ಮನೇಶ್ವರ ನಿಲ್ದಾಣಗಳ ನಡುವೆ ಭಾಬನಿಪಲ್ಲಿ ಎಂಬಲ್ಲಿ ಸಂಭವಿಸಿದೆ.
ಗಜರಾಜನಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲು - ಪುರಿ-ಸೂರತ್ ಎಕ್ಸ್‌ಪ್ರೆಸ್ ರೈಲು ಸುದ್ದಿ
![ಗಜರಾಜನಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲು puri and surat express train, puri and surat express train derailed, puri and surat express train derailed at bhabanipali, puri and surat express train news, puri and surat express train latest news, ಪುರಿ-ಸೂರತ್ ಎಕ್ಸ್‌ಪ್ರೆಸ್ ರೈಲು, ಹಳಿ ತಪ್ಪಿದ ಪುರಿ-ಸೂರತ್ ಎಕ್ಸ್‌ಪ್ರೆಸ್ ರೈಲು, ಭಾಬನಿಪಲ್ಲಿಯಲ್ಲಿ ಹಳಿ ತಪ್ಪಿದ ಪುರಿ-ಸೂರತ್ ಎಕ್ಸ್‌ಪ್ರೆಸ್ ರೈಲು, ಪುರಿ-ಸೂರತ್ ಎಕ್ಸ್‌ಪ್ರೆಸ್ ರೈಲು ಸುದ್ದಿ,](https://etvbharatimages.akamaized.net/etvbharat/prod-images/768-512-9950273-113-9950273-1608519694788.jpg)
07:15 December 21
ಆನೆಗೆ ಡಿಕ್ಕಿ ಹೊಡೆದು ಎಕ್ಸ್‌ಪ್ರೆಸ್ ರೈಲೊಂದು ಹಳಿ ತಪ್ಪಿರುವ ಘಟನೆ ಒಡಿಶಾದ ಸಂಬಲ್ಪುರನಲ್ಲಿ ನಡೆದಿದೆ.
ತಡರಾತ್ರಿ 2:04ಕ್ಕೆ ಆನೆಯೊಂದು ಎಕ್ಸ್‌ಪ್ರೆಸ್ ರೈಲಿಗೆ ಅಡ್ಡ ಬಂದಿದೆ. ರೈಲು ಆನೆಗೆ ಡಿಕ್ಕಿ ಹೊಡಿದು ಹಳಿ ತಪ್ಪಿದೆ. ಈ ಘಟನೆಯಲ್ಲಿ ಆನೆ ದೇಹ ಸಂಪೂರ್ಣ ಛಿದ್ರವಾಗಿದೆ.
ರೈಲು ರಾತ್ರಿ 1:55 ಕ್ಕೆ ಎಲಿಫೆಂಟ್ ಬ್ಯಾರಿ ನಿಲ್ದಾಣವನ್ನು ದಾಟಿ ಮುಂದಕ್ಕೆ ಪ್ರಯಾಣಿಸುತ್ತಿದ್ದಾಗ ಆನೆಯೊಂದು ರೈಲಿಗೆ ಅಡ್ಡಬಂದಿದ್ದರಿಂದ ಈ ಅವಘಡ ನಡೆದಿದೆ. ರೈಲಿನ ವೇಗ ಕಡಿಮೆ ಇರುವುದರಿಂದ ಎಂಜಿನ್ ಮಾತ್ರ ಹಳಿ ತಪ್ಪಿದೆ ಎಂದು ವರದಿಯಾಗಿದೆ.
ಪುರಿ - ಸೂರತ್ ಎಕ್ಸ್‌ಪ್ರೆಸ್ ರೈಲು ಪುರಿಯಿಂದ ಸಂಬಲ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯರ ನೆರವಿನಿಂದ ರೈಲ್ವೆ ಅಧಿಕಾರಿಗಳು ಎಂಜಿನ್ ಅಡಿಯಲ್ಲಿ ಸಿಲುಕೊಂಡಿರುವ ಆನೆ ಮೃತದೇಹವನ್ನು ತೆಗೆದು ಹಾಕಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಕಾರ್ಯಾಚರಣೆ ಬಳಿಕ ಬೆಳಗ್ಗೆ 5:55 ಕ್ಕೆ ರೈಲು ಆ ಸ್ಥಳದಿಂದ ನಿರ್ಗಮಿಸಿತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.