ಕರ್ನಾಟಕ

karnataka

ETV Bharat / bharat

ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ - ಭದ್ರತೆ ಹಿಂಪಡೆದ ದಿನದ ಬಳಿಕ ಪಂಜಾಬಿ ಗಾಯಕ ಬಲಿ

ಪಂಜಾಬ್​ನಲ್ಲಿ ಆಪ್​ ಸರ್ಕಾರ 424 ಗಣ್ಯರಿಗೆ ನೀಡಿದ್ದ ಭದ್ರತೆಯನ್ನು ವಾಪಸ್​ ಪಡೆದ ಒಂದು ದಿನದ ಬಳಿಕ ವಿವಾದಿತ ಗಾಯಕ ಸಿಧು ಮೂಸ್ ವಾಲಾರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

punjabi-singer-sidhu
ಗಾಯಕ ಗುಂಡೇಟಿಗೆ ಬಲಿ

By

Published : May 29, 2022, 7:06 PM IST

Updated : May 29, 2022, 8:12 PM IST

ಚಂಡೀಗಢ(ಪಂಜಾಬ್​):ರಾಜಕೀಯ, ಧಾರ್ಮಿಕ ಮುಖಂಡರು, ನಿವೃತ್ತ ಪೊಲೀಸ್​ ಅಧಿಕಾರಿಗಳು ಸೇರಿದಂತೆ 424 ವಿವಿಧ ಗಣ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್​ ಪಡೆದ ಒಂದು ದಿನದ ಬಳಿಕ ಖ್ಯಾತ ಗಾಯಕ ಸಿಧು ಮೂಸ್ ವಾಲಾರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಈ ವರ್ಷದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನಸಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಭಾರಿ ಅಂತರದಿಂದ ಪರಾಭವಗೊಂಡರು. ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವರಾಗಿದ್ದ ವಿಜಯ್ ಸಿಂಗ್ಲಾ ಅವರನ್ನು ಇತ್ತೀಚೆಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಜಾಗೊಳಿಸಿದ್ದರು.

ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ

ಕಳೆದ ತಿಂಗಳು ಗಾಯಕ ಸಿಧು ಮೂಸ್ ವಾಲಾ ತಮ್ಮ 'ಸ್ಕೇಪ್​ಗೋಟ್​'(ಬಲಿಪಶು) ಹಾಡಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಅದರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹಾಡಿದ್ದಾರೆ ಎಂದು ಭಾರಿ ವಿವಾದ ಉಂಟಾಗಿತ್ತು. ಅಲ್ಲದೆ, ಹಾಡಿನಲ್ಲಿ ಗಾಯಕ ಮೂಸಾ ವಾಲಾ ಎಎಪಿ ಕಾರ್ಯಕರ್ತರನ್ನು ದೇಶದ್ರೋಹಿ ಎಂದು ಕರೆದಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ಪಿತೂರಿ ನಡೆಸಲಾಗಿತ್ತು.

ತಮಗೆ ಜೀವಭಯ ಇದ್ದ ಕಾರಣ ಭದ್ರತೆಯನ್ನು ಕೋರಿದ್ದ ಗಾಯಕನಿಗೆ ಹಿಂದಿನ ಕಾಂಗ್ರೆಸ್​ ಸರ್ಕಾರ ಭದ್ರತೆ ನೀಡಿತ್ತು. ಇದೀಗ ಭಗವಂತ್​ ಮಾನ್​ ಸರ್ಕಾರ ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ಓದಿ:424 ಜನರ ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ.. ಸಿಎಂ ಭಗವಂತ್ ಮಾನ್ ಮಹತ್ವದ ತೀರ್ಮಾನ

Last Updated : May 29, 2022, 8:12 PM IST

ABOUT THE AUTHOR

...view details