ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಯಲ್ಲಿ ನಿನ್ನೆ ನಡೆದ ರೈತರ ಪ್ರತಿಭಟನೆ ವೇಳೆ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವ ಸಂದರ್ಭ ಪಂಜಾಬಿ ನಟ ಸಿಧು ಫೇಸ್ಬುಕ್ ಲೈವ್ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಪಂಜಾಬಿ ನಟ ಸಿಧು ಫೇಸ್ಬುಕ್ ಲೈವ್ ಸಿಧು ಪಂಜಾಬಿಯಲ್ಲಿ "ನಾವು ನಿಶಾನ್ ಸಾಹಿಬ್ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸಿದ್ದೇವೆ. ಪ್ರತಿಭಟಿಸುವುದು ನಮ್ಮ ಪ್ರಜಾಪ್ರಭುತ್ವದ ಹಕ್ಕು, ಅದನ್ನು ಚಲಾಯಿಸಿದ್ದೇವೆ" ಎಂದು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ರೈತರ ಪರೇಡ್ ಯಾವ ರೀತಿ ಹಿಂಸಾತ್ಮಕ ರೂಪ ಪಡೆಯಿತು ಎಂಬುದರ ಟೈಮ್‌ಲೈನ್...
ಕಳೆದ ವಾರ ಪಂಜಾಬ್ ರೈತ ನಾಯಕ ಬಲದೇವ್ ಸಿಂಗ್ ಸಿರ್ಸಾ ಸೇರಿದಂತೆ ಸುಮಾರು 40 ಮಂದಿಗೆ ಎನ್‌ಐಎ ಸಮನ್ಸ್ ಜಾರಿ ಮಾಡಿತ್ತು. ಅವರಲ್ಲಿ ಪಂಜಾಬಿ ನಟ ದೀಪ್ ಸಿಧು ಹೂಡಾ ಒಬ್ಬರಾಗಿದ್ದರು. ಅಮೆರಿಕ ಮೂಲದ ಖಲಿಸ್ತಾನ್ ಪರ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸಮನ್ಸ್ನಲ್ಲಿ ತಿಳಿಸಿತ್ತು.