ಕರ್ನಾಟಕ

karnataka

ETV Bharat / bharat

Punjab Vidhansabha Election 2022 : ಮೊದಲ ಲಿಸ್ಟ್​ ರಿಲೀಸ್ ಮಾಡಿದ ಆಮ್​ ಆದ್ಮಿ - ಆಮ್​ ಅಭ್ಯರ್ಥಿಗಳ ಪಟ್ಟಿ

ಪಂಜಾಬ್​​ನಲ್ಲಿ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ಈಗಾಗಲೇ ಬಿಕ್ಕಟ್ಟು ಉಂಟಾಗಿರುವ ಕಾರಣ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್ ಸಿಂಗ್(captain amrinder singh)​ ಪಕ್ಷದಿಂದ ಹೊರ ಬಂದಿದ್ದಾರೆ. ಹೀಗಾಗಿ, ಇದರ ಸದುಪಯೋಗ ಪಡೆದುಕೊಳ್ಳಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿರುವ ಎಎಪಿ ಈಗಾಗಲೇ ಅನೇಕ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ..

AAP
AAP

By

Published : Nov 12, 2021, 3:38 PM IST

ನವದೆಹಲಿ :ಮುಂದಿನ ವರ್ಷ ಪಂಜಾಬ್​ ವಿಧಾನಸಭೆ ಚುನಾವಣೆ(Punjab Vidhansabha Election) ನಡೆಯಲಿದೆ. ಅದಕ್ಕಾಗಿ ಆಮ್​ ಆದ್ಮಿ ಪಕ್ಷ(AAP) ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಇದೀಗ ಮೊದಲ ಲಿಸ್ಟ್​​ ರಿಲೀಸ್ ಮಾಡಿರುವ ಪಕ್ಷ 10 ಅಭ್ಯರ್ಥಿಗಳ ಹೆಸರು ಬಹಿರಂಗಪಡಿಸಿದೆ.

ಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳು ಹಾಲಿ ಶಾಸಕರಾಗಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ. ಎಎಪಿ ಶಾಸಕಾಂಗ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ದಿರ್ಬಾ ವಿಧಾನಸಭಾ ಕ್ಷೇತ್ರದಿಂದ, ಸರವ್ಜಿತ್ ಕೌರ್ ಮನುಕೆ ಜಾಗರಾನ್‌ನಿಂದ ಸ್ಪರ್ಧಿಸಲಿದ್ದಾರೆ.

ಉಳಿದಂತೆ ಜೈ ಕಿಶನ್ ರೋರಿ, ಮಂಜೀತ್ ಬಿಲಾಸ್ಪುರ್​, ಕುಲ್ತಾರ್ ಸಿಂಗ್ ಸಂಧ್ವಾನ್​, ಬಲ್ಜಿಂದರ್ ಕೌರ್​, ಪ್ರನ್ಸಿಪಾಲ್​​ ಬುದ್ರಾಮ್​, ಅಮರ್​ ಅರೋರ್​ ಹಾಗೂ ಕುಲ್ವಾತ್​​ ಕಣಕ್ಕಿಳಿಯಲಿದ್ದಾರೆ.

ಪಂಜಾಬ್​​ನಲ್ಲಿ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ಈಗಾಗಲೇ ಬಿಕ್ಕಟ್ಟು ಉಂಟಾಗಿರುವ ಕಾರಣ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್ ಸಿಂಗ್(captain amrinder singh)​ ಪಕ್ಷದಿಂದ ಹೊರ ಬಂದಿದ್ದಾರೆ.

ಹೀಗಾಗಿ, ಇದರ ಸದುಪಯೋಗ ಪಡೆದುಕೊಳ್ಳಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿರುವ ಎಎಪಿ ಈಗಾಗಲೇ ಅನೇಕ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

ABOUT THE AUTHOR

...view details