ಚಂಡೀಗಢ: ಪಂಜಾಬ್ ವಿಧಾನಸೌಧದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಈ ನಿರ್ಣಯವನ್ನು ಅನುಮೋದಿಸಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಟು ಪ್ರಶ್ನೆಗಳನ್ನು ಹಾಕಿದ್ದಾರೆ.
ಅಗ್ನಿಪಥ್ ಯೋಜನೆ ವಿರುದ್ಧದ ನಿರ್ಣಯ ಅಂಗೀಕರಿಸಿದ ಮುಖ್ಯಮಂತ್ರಿ ಭಗವಂತ್ ಮಾನ್, ಈ ಯೋಜನೆ ತುಂಬಾ ಒಳ್ಳೆಯದಾಗಿದ್ದರೆ ಬಿಜೆಪಿಗರು ಮೊದಲು ತಮ್ಮ ಮಕ್ಕಳನ್ನು ಅಗ್ನಿವೀರ್ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈ ನಿರ್ಣಯವನ್ನು ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಸಹ ಬೆಂಬಲಿಸಿವೆ. ಈ ವೇಳೆ ಬಿಜೆಪಿ ನಿರ್ಣಯವನ್ನು ವಿರೋಧಿಸಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಗ್ನಿಪಥ್ ಯೋಜನೆ ಹಿಂಪಡೆಯಲು ಒತ್ತಾಯಿಸುವುದಾಗಿ ಸಿಎಂ ಹೇಳಿದರು.
ಪ್ರಸ್ತಾವನೆಗೆ ಬಿಜೆಪಿ ವಿರೋಧ: ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕರಾದ ಅಶ್ವಿನಿ ಶರ್ಮಾ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು. ಇದು ದೇಶ ಮತ್ತು ಸೇನೆಯ ಭದ್ರತೆಗೆ ಸಂಬಂಧಿಸಿದ ವಿಚಾರ. ನಾವು ಮೂರು ಪಡೆಗಳ ಮುಖ್ಯಸ್ಥರನ್ನು ನಂಬಬೇಕು. ಯುಪಿ ಸರ್ಕಾರವು ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಮುಂದಾಗಿದೆ, ಪಂಜಾಬ್ ಏಕೆ ಹಾಗೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಇಂದು ವಿಶ್ವ ಸೋಶಿಯಲ್ ಮೀಡಿಯಾ ದಿನ: ಹುಷಾರು, ಇದು ಎರಡಲಗಿನ ಕತ್ತಿ, ಎಚ್ಚರ ತಪ್ಪಿದರೆ ಅಪಾಯ!